ಮಾಲ್ಡೀವ್ಸ್​ನಲ್ಲಿ ಮೈಚಳಿ ಬಿಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ಸೋನು ಶ್ರೀನಿವಾಸ ಗೌಡ: ನೆಟ್ಟಿಗರು ಹೇಳಿದ್ದಿಷ್ಟು…

Sonu Srinivas Gowda
Published on

ಬೆಂಗಳೂರು: ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುವವರಿಗೆ ಸೋನು ಶ್ರೀನಿವಾಸ ಗೌಡರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ ವಿಡಿಯೋಗಳು ಮತ್ತು ಮೀಮ್ಸ್​ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಪ್ರತಿಭೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ಮತ್ತು ಮಾಡುತ್ತಿರುವ ಸೋನು, ಇದೇ ವಿವಾದಗಳ ಕಾರಣಕ್ಕೆ ವಿವಾದಿತ ಬಿಗ್​ಬಾಸ್​ ಶೋನಲ್ಲೂ ಭಾಗವಹಿಸಿದ್ದು ಬಹುತೇಕರಿಗೆ ತಿಳಿದಿದೆ.

ತಾಜಾ ಸಂಗತಿಯೇನೆಂದರೆ ಸೋನು ಶ್ರೀನಿವಾಸ ಗೌಡ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಈ ಬಾರಿ ಅವರು ಯಾವುದೇ ವಿವಾದವನ್ನು ಮಾಡಿಕೊಂಡಿಲ್ಲ. ಬದಲಾಗಿ ಗ್ಲಾಮರಸ್​ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ. ಅಲ್ಲದೆ, ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಸೋನು ಶ್ರೀನಿವಾಸ ಗೌಡ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿರುವ ಸೋನು, ಪ್ರಕೃತಿಯ ಮಡಿಲಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಮಾಲ್ಡೀವ್ಸ್​ಗೆ ಯಾರೇ ಆಗಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಏನಾದರೂ ಒಂದು ಅಪ್​ಡೇಟ್​ ಕೊಡಲೇಬೇಕು. ಇಲ್ಲದಿದ್ದರೆ, ಅವರ ಪ್ರವಾಸ ಪೂರ್ಣವಾಗುವುದೇ ಇಲ್ಲ. ಇದೀಗ ಸೋನು ಗೌಡ ಸಹ ಹಾಟ್​ ಫೊಟೋಗಳನ್ನು ಇನ್​ಸ್ಟಾಗ್ರಾಂನ್ಲಲಿ ಹರಿಬಿಟ್ಟಿದ್ದಾರೆ.

ಒಂದು ಕೈಯಲ್ಲಿ ಕೋಕೋ ಕೋಲಾ ಡ್ರಿಂಕ್ಸ್​ ಗ್ಲಾಸ್​ ಹಿಡಿದಿರುವ ಫೋಟೋಗಳು ಹಾಗೂ ಕಪ್ಪು ಬಣ್ಣದ ಸ್ವಿಮ್​ ಶೂಟ್​ ಧರಿಸಿ ಸೋನು ಗೌಡ ಕ್ಯಾಮೆರಾ ಮುಂದೆ ಹಾಟ್​ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ. ಸಾವಿರಾರು ಲೈಕ್ಸ್​ ಬಂದಿವೆ. ಆದರೆ, ಸೋನು ಅವರ ಹಾಟ್ ಅವತಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಾಕಷ್ಟು ನೆಟ್ಟಿಗರು ಅಶ್ಲೀಲ ಕಾಮೆಂಟ್​ಗಳ ಮೂಲಕ ಸೋನು ಅವರನ್ನು ನಿಂದಿಸಿದ್ದಾರೆ. ಇನ್ನು ಕೆಲವರು ಸೋನು ಬೆಂಬಲಕ್ಕೆ ನಿಂತಿದ್ದು, ಅವರ ಜೀವನ ಅವರ ಇಷ್ಟ ಎಂದಿದ್ದಾರೆ. ಕೆಟ್ಟ ಕಾಮೆಂಟ್​ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ವಿವಾದಗಳು ಹಾಗೂ ಬಿಗ್​ಬಾಸ್​ ಸ್ಪರ್ಧೆಯಿಂದ ಪಡೆದು ಖ್ಯಾತಿಯಿಂದ ಸೋನು ಶ್ರೀನಿವಾಸ್​ ಗೌಡ ಅವರಿಗೆ ಸಿನಿಮಾ ಆಫರ್​ಗಳು ಬರುತ್ತಿವೆ. ಬರೀ ಸಿನಿಮಾ ಮಾತ್ರವಲ್ಲ, ವೆಬ್​ ಸಿರೀಸ್​ ಮತ್ತು ಶಾರ್ಟ್​ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಟಿಕ್​ಟಾಕ್​ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಹೇಳಿಕೊಂಡಿದ್ದಾರೆ. ಕ್ಯಾಡ್ಬರೀಸ್​ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಈ ಹಿಂದೆ ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net