ಬಿಗ್​ಬಾಸ್ ಮಾಜಿ ಸ್ಪರ್ಧಿ ಕಾರು ಅಪಘಾತ; ಅಮೆರಿಕದಿಂದ ಬಂದಿದ್ದ ಸ್ನೇಹಿತೆ ಸ್ಥಳದಲ್ಲೇ ಸಾವು

bb
Published on

ಚೆನ್ನೈ: ತಮಿಳು ಬಿಗ್​ಬಾಸ್​ನ ಮಾಜಿ ಸ್ಪರ್ಧಿ ಯಶಿಕಾ ಆನಂದ್​ ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯಶಿತಾ ಗಂಭೀರ ಗಾಯಾಳುವಾಗಿದ್ದ, ಅವರ ಒಬ್ಬ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭಾನುವಾರ ಮುಂಜಾನೆಯ ಸಮಯದಲ್ಲಿ ಚೆನ್ನೂನ ಈಸ್ಟ್ ಕೋಸ್ಟ್ ಈ ಅಪಘಾತ ಸಂಭವಿಸಿದೆ. ಯಶಿತಾ, ಆಕೆಯ ಸ್ನೇಹಿತೆ ವಲ್ಲಿಚಟ್ಟಿ ಭವಾನಿ (28) ಹಾಗೂ ಇನ್ನಿಬ್ಬರು ಹುಡುಗರು ಕಾರಿನಲ್ಲಿದ್ದರು. ಕಾರು ಮಾಮುಲ್ಲಾಪುರಂನಿಂದ ಚೆನ್ನೈ ಕಡೆಗೆ ಸಾಗುತ್ತಿತ್ತು.

ಯಶಿಕಾ ಅವರ ಸ್ನೇಹಿತ ಕಾರನ್ನು ಓಡಿಸುತ್ತಿದ್ದ ಎನ್ನಲಾಗಿದೆ. ರಾತ್ರಿ 11.45ರ ಸಮಯಕ್ಕೆ ಚಾಲಕನು ವಾಹನದ ನಿಯಂತ್ರಣವನ್ನು ಕಳೆದುಕೊಂಡು ಹೆದ್ದಾರಿಯ ಮಧ್ಯದ ತಡೆಗೋಡೆಗೆ ಹೊಡೆದಿದ್ದಾನೆ. ಅದಾದ ನಂತರ ಕಾರು ಅಡ್ಡಾದಿಡ್ಡಿ ಚಲಿಸಿ ತಿರುಗಿ ಬಿದ್ದಿದ್ದಾಗಿ ಹೇಳಲಾಗಿದೆ. ದಾರಿಹೋಕರು ಮತ್ತು ಇತರ ವಾಹನ ಚಾಲಕರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಲ್ಲಿಚಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಾಮಲ್ಲಾಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಭವಾನಿ ಒಬ್ಬ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ಕೆಲಸ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net