ಕ್ಲಬ್​ಹೌಸ್​ನಿಂದ ಲಕ್ಷಾಂತರ ಜನರ ಡೇಟಾ ಲೀಕ್?! ಸಂಸ್ಥೆ ಕೊಟ್ಟ ಉತ್ತರವೇನು?

ಚಲುಬ
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕ್ಲಬ್​ಹೌಸ್ ಆ್ಯಪ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಯಾರಾದರೂ ಯಾರೊಂದಿಗಾದರೂ ಮುಕ್ತವಾಗಿ ಮಾತನಾಡಲು ಅವಕಾಶವಿರುವ ಈ ಆ್ಯಪ್​ ಸಾಕಷ್ಟು ವಿಚಾರಗಳಲ್ಲಿ ಜನತೆಗೆ ಇಷ್ಟವಾಗಿದೆ. ಆದರೆ ಈ ಆ್ಯಪ್​ನಿಂದಾಗಿ ಲಕ್ಷಾಂತರ ಜನರ ಡೇಟಾ ಲೀಕ್​ ಆಗಿದೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ.

ಸೈಬರ್ ಭದ್ರತಾ ತಜ್ಞ ಜಿತೆನ್ ಜೈನ್ ಎನ್ನುವವರು ಈ ವಿಚಾರವಾಗಿ ತಿಳಿಸಿದ್ದಾರೆ. ಕ್ಲಬ್​ಹೌಸ್ ಬಳಸುವವರು ಮಾತ್ರವಲ್ಲ, ಅವರ ಫೋನ್​ನಲ್ಲಿ ಇರುವ ಕಾಂಟಾಕ್ಟ್​ಗಳ ದತ್ತಾಂಶವೂ ಲೀಕ್ ಆಗಿದೆ. ಅದೆಲ್ಲವೂ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕ್ಲಬ್​ಹೌಸ್​ಗೆ ಕಂಟ್ಯಾಕ್ಟ್ ಲಿಸ್ಟ್ ಅಕ್ಸೆಸ್ ಇರುವುದರಿಂದ ಅದರ ಬಳಕೆದಾರರ ಕಾಂಟಾಕ್ಟ್​ನಲ್ಲಿರುವವರಿಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ಆರೋಪವನ್ನು ಕ್ಲಬ್​ಹೌಸ್ ಸಂಪೂರ್ಣವಾಗಿ ತಳ್ಳಿ ಹಾಕಿದೆ. ನಾವು ನಮ್ಮ ಗ್ರಾಹಕರ ಸುರಕ್ಷೆತೆಗಾಗಿ ಹೆಚ್ಚಿನ ಗಮನ ನೀಡುತ್ತೇವೆ. ಗ್ರಾಹಕರ ಹೆಸರನ್ನಾಗಲೀ, ಫೋಟೋವನ್ನಾಗಲೀ ಅಥವಾ ಯಾವುದೇ ರೀತಿಯ ದತ್ತಾಂಶವನ್ನು ನಾವು ಸೋರಿಕೆ ಮಾಡುತ್ತಿಲ್ಲ ಎಂದು ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net