ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ನಾಳೆ ಭಾರತಕ್ಕೆ ವಾಪಸ್

meera
Published on

ನವದೆಹಲಿ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆದ್ದಿರುವ ಮಣಿಪುರದ ಯುವತಿ ಮೀರಾ ಬಾಯಿ ನಾಳೆಯೇ ಭಾರತಕ್ಕೆ ವಾಪಸಾಗಲಿದ್ದಾರೆ.

ಜುಲೈ 26ರಂದು ಸಂಜೆ 4.45ರ ಸಮಯಕ್ಕೆ ಮೀರಾ ಬಾಯಿ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂದು ತಿಳಿಸಲಾಗಿದೆ. ಒಲಿಂಪಿಕ್ಸ್ 2020ಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅವರನ್ನು ಸ್ವಾಗತಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಹಿಳೆಯರ 49 ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ನಲ್ಲಿ ಮೀರಾ ಬಾಯಿಗೆ ಬೆಳ್ಳಿ ಪದಕ ಲಭಿಸಿದೆ. "ನನ್ನ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿರುವ ಖುಷಿ ನನಗಿದೆ. ನಾನು ಕೇವಲ ಮಣಿಪುರಕ್ಕೆ ಸೇರಿದ ಹುಡುಗಿಯಲ್ಲ ನಾನು ಪೂರ್ತಿ ದೇಶಕ್ಕೆ ಸೇರಿದವಳು" ಎಂದು ಮೀರಾ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರ ಗೆಲುವನ್ನು ಪೂರ್ತಿ ದೇಶ ಸಂಭ್ರಮಿಸಿದೆ. ಅವರಿಗೆ ಸರ್ಕಾರಿ ಕೆಲಸದ ಜತೆ ಒಂದು ಕೋಟಿ ರೂಪಾಯಿ ನಗದು ಬಹುಮಾನವನ್ನೂ ಈಗಾಗಲೇ ಘೋಷಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net