ಬಿಗ್​ಬಾಸ್​ ಮನೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಶಂಕರ್​ ಅಶ್ವಥ್​ ನೇರ ನುಡಿ..!

Ashwath
Published on

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯು ಎರಡನೇ ವಾರ ಪೂರೈಸಿ, ಭರ್ಜರಿ ಮನರಂಜನೆಯೊಂದಿಗೆ ಮುನ್ನುಗ್ಗುತ್ತಿದೆ. ಇಂದಿನ ವಾರಾಂತ್ಯದ ವಿಶೇಷ ಸೂಪರ್​ ಸಂಡೆ ವಿಥ್​ ಸುದೀಪ್​ ಎಪಿಸೋಡ್​ನಲ್ಲಿ ಹಿರಿಯ ಸ್ಪರ್ಧಿ ಶಂಕರ್​ ಅಶ್ವಥ್​ ಅವರು ನೀಡಿರುವ ಒಂದು ಹೇಳಿಕೆ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಯಾರು ನಕಲಿ ಮತ್ತು ಅಸಲಿ ಎಂದು ನಿಮಗೆ ಅನಿಸುತ್ತಿದೆಯೋ ಅವರ ಬಗ್ಗೆ ತಿಳಿಸಿ ಎಂದು ನಟ ಕಿಚ್ಚ ಸುದೀಪ್​ ಅವರು ಸ್ಪರ್ಧಿಗಳನ್ನು ಇಂದಿನ ಎಪಿಸೋಡ್​ನಲ್ಲಿ ಕೇಳುತ್ತಾರೆ. ಪ್ರತಿಯೊಬ್ಬರು ತಮಗೆ ಅನಿಸಿದಂತೆ ಯಾರು ನಕಲಿ ಮತ್ತು ಅಸಲಿ ಎಂಬುದನ್ನು ಹೇಳುತ್ತಾ ಹೋಗುತ್ತಾರೆ.

ಇದರ ನಡುವೆ ಶಂಕರ್​ ಅಶ್ವಥ್​ ಅವರು ತಮ್ಮ ಸರದಿ ಬಂದಾಗ ನೀಡಿದ ಒಂದು ಹೇಳಿಕೆ ಇಡೀ ಮನೆಗೆ ಒಂದು ತಿರುವು ನೀಡಿದೆ. ಶಂಕರ್​ ಅವರ ಪ್ರಕಾರ ಮನೆಯಲ್ಲಿರುವ ಎಲ್ಲರು ನಕಲಿಗಳಂತೆ. ನೀವು ಕೇಳಿದಂತೆ ನೇರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಸರ್​. ಹೇಳಿದರೆ ಯಾರು ಪಕ್ಕದಲ್ಲಿ ಚುಚ್ಚುತ್ತಾರೋ ಅನ್ನೋ ಭಯವೋ? ಕುತಂತ್ರದ ಬುದ್ಧಿಯು ಇರುತ್ತದೆ ಎಂದಿದ್ದಾರೆ.

ಹೀಗಾಗಿ ಇಂದಿನ ಎಪಿಸೋಡ್​ ಶಂಕರ್​ ಅವರು ನೀಡಿರುವ ಹೇಳಿಕೆಯ ಮೇಲೆ ನಿಂತಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು ಎಂಬುದು ಇಂದು ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net