More

    ಅಡುಗೆ ಮನೆ ವಿಭಾಗ ನಂದು ಇಲ್ಲಿಗೆ ಯಾರು ಬರಂಗಿಲ್ಲ: ಬಿಗ್​ಬಾಸ್​ನಲ್ಲಿ ಜೋರಾಯ್ತು ಜಡೆ ಜಗಳ..!

    ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ರ ಶೋ ಒಂದು ವಾರ ಪೂರೈಸುವ ಹಂತಕ್ಕೆ ಬಂದಿದೆ. ಈ ವಾರ ಯಾರು ಮನೆಯಿಂದ ಎಲಿಮಿನೇಟ್​ ಆಗ್ತಾರೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಬಿಗ್​ಬಾಸ್​ ಟಾಸ್ಕ್​ನಿಂದ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದ್ದು, ಒಂದಿಷ್ಟು ವೈಮಸ್ಸಿನ ಜತೆಗೆ ಜಗಳ​, ಸ್ನೇಹ ಮತ್ತು ಪ್ರೀತಿ ಮಿಶ್ರಣ ಈ ವಾರದ ಶೋನಲ್ಲಿ ಪ್ರೇಕ್ಷರನ್ನ ರಂಜಿಸಿದೆ.

    ದಿನ ಕಳೆದಂತೆ ಬಿಗ್​ಬಾಸ್​ ಶೋ ಕುತೂಹಲ ಹೆಚ್ಚಾಗುತ್ತಿದ್ದು, ಇಂದಿನ ಎಪಿಸೋಡ್​ ಸಹ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಎಂದಿನಂತೆ ಜಡೆ ಜಗಳ ಬಿಗ್​ಬಾಸ್​ ಮನೆಯಲ್ಲಿ ಭುಗಿಲೆದ್ದಿದೆ. ಅಡುಗೆ ಮನೆಯ ವಿಚಾರವಾಗಿ ನಿರ್ಮಲಾ ಚೆನ್ನಪ್ಪ ಮತ್ತು ಚಂದ್ರಕಲಾ ಮೋಹನ್​ ನಡುವೆ ವಾಕ್ಸಮರ ಶುರುವಾಗಿದೆ.

    ಬಿಗ್​ಬಾಸ್​ ವಹಿಸಿರುವ ಅಡುಗೆ ಮನೆ ಜವಬ್ದಾರಿ ಬಗ್ಗೆ ನಿರ್ಮಲಾ ಚೆನ್ನಪ್ಪ ವಿರುದ್ಧ ಅಸಮಾಧಾನ ಹೊರಹಾಕಿರುವ ಚಂದ್ರಕಲಾ, ನೀನು ಏನು ಕೆಲಸ ಮಾಡುತ್ತಿಲ್ಲ. ಸುಮ್ಮನೇ ಅಡ್ಡಾಡುತ್ತಿದ್ದೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಿರ್ಮಲಾ ಕ್ಷಮೆಯಾಚಿಸಿದರೂ ಚಂದ್ರಕಲಾ ಕೋಪ ಕಡಿಮೆಯಾಗದೇ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದೆ.

    ಇದನ್ನೂ ಓದಿರಿ: ಮನೆಯಲ್ಲೇ ಕುಳಿತು ಆರಾಮಾಗಿ ಹಣ ಗಳಿಸುವ ಆಸೆ ಇದ್ರೆ ಈ ಸ್ಟೋರಿಯನ್ನೊಮ್ಮೆ ಓದಿ..!

    ಚಂದ್ರಕಲಾ ಮಾತಿಗೆ ಎದುರೇಟು ನೀಡಿರುವ ನಿರ್ಮಲಾ ಈ ಕ್ಷಣದಿಂದ ಅಡುಗೆ ಮನೆ ವಿಭಾಗ ನಂದು ಇಲ್ಲಿಗೆ ಯಾರು ಬರಂಗಿಲ್ಲ ಎಂದು ಖಾರವಾಗಿಯೇ ಮಾತನಾಡಿದ್ದಾರೆ. ಇಬ್ಬರ ನಡುವಿನ ವಾಕ್ಸಮರದ ಕಂಪ್ಲೀಟ್​ ವಿವರಣೆ ಇಂದಿನ ಎಪಿಸೋಡ್​ನಲ್ಲಿ ಪ್ರಸಾರವಾಗಲಿದೆ.

    ನಿನ್ನೆಯಷ್ಟೇ ನಿರ್ಮಲಾ ಹೊಸ ಲುಕ್​ಗೆ ಸ್ಪರ್ಧಿಗಳು ಹೆದರಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಸೀರೆ ಹುಟ್ಟಿಕೊಂಡು ಇತರೆ ಸ್ಪರ್ಧಿಗಳ ಎದುರು ನಿರ್ಮಲಾ ಪ್ರತ್ಯಕ್ಷರಾಗಿದ್ದರು. ಹಳದಿ ಸೀರೆ ಹುಟ್ಟಿಕೊಂಡ ಅವರ ವಿಚಿತ್ರ ಭಾವಭಿನಯ ನೋಡಿ ಸ್ಪರ್ಧಿಗಳು ಹೆದರಿದ್ದರು. ಇದೇ ವಿಚಾರವು ಸಹ ಚಂದ್ರಕಲಾ ಮತ್ತು ನಿರ್ಮಲಾ ನಡುವಿನ ವಾಕ್ಸಮರದ ವೇಳೆ ಪ್ರಸ್ತಾಪವಾಗಿದೆ.

    ವೀಕ್ಷಕರ ಪ್ರಕಾರ ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರ‍್ಯಾರು?

    15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಈಕೆಯ ಮಹಾ ಸುಳ್ಳುಗಳಿಗೆ ಅಂತ್ಯವಾಡಿದ ಕೋರ್ಟ್​!

    ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts