

ಬೆಂಗಳೂರು: ನಾವು ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸಿದ್ದೀವಿ ಅನ್ನೋ ಕೋಪ ಹಲವರಲ್ಲಿ ಇದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಎಸ್.ಡಿ. ಸೋಮಶೇಖರ್ ಗಂಭೀರ ಆರೋಪ ಮಾಡಿದರು.
ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್ ಮೆಟ್ಟಿಲೇರಿರುವ ಆರು ಸಚಿವರ ಪೈಕಿ ಸೋಮಶೇಖರ್ ಕೂಡ ಒಬ್ಬರು. ಈ ಕುರಿತು ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ವಿಡಿಯೋ ಪ್ರಕರಣ ನಮಗೆ ಭೀತಿ ತಂದಿಲ್ಲ. ಆ ಥರ ನಾವು ಯೋಚನೆಯನ್ನೂ ಮಾಡಿಲ್ಲ ಎಂದರು.
ಸದ್ಯಕ್ಕೆ ಆರು ಜನ ಸಚಿವರು ಸಿಕ್ಕಿದ್ರು. ನಾವೆಲ್ಲರೂ ನಮ್ಮ ವಿರುದ್ಧವಾದ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್ಗೆ ಅರ್ಜಿ ಹಾಕಿದ್ದೀವಿ. ಉಳಿದ ಸಚಿವರೂ ಕೋರ್ಟ್ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ನಾಡಿದ್ದು(ಸೋಮವಾರ) ಉಳಿದ ಸಚಿವರು ಅರ್ಜಿ ಹಾಕಲಿದ್ದಾರೆ ಎಂದಯ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಕೆಲ ಮಾಧ್ಯಮಗಳಲ್ಲಿ ಇರೋಬರೋದೆಲ್ಲ ಹಾಕಿ ಅವಮಾನ ಮಾಡ್ತಾರೆ. ಒಳ್ಳೇದು-ಕೆಟ್ಟದು ಅಂತ ನೋಡಲ್ಲ. ಅದಕ್ಕಾಗಿ ನಾವು ಕೋರ್ಟ್ಗೆ ಮೊರೆ ಹೋಗಿದ್ದೀವಿ ಎಂದರು.