

Google Pay, PhonePe: ಇಂದಿನ ಅತ್ಯಾಧುನಿಕ ಯುಗದಲ್ಲಿ ಫೋನ್ ಪೇ ಸೇರಿದಂತೆ ಎಲ್ಲಾ ರೀತಿಯ ಪೇಗಳಲ್ಲಿ(Digital Pay) ಬಳಸುವ UPI (Unified Payments Interface) ಗೂ ಕೂಡ ಇನ್ಮುಂದೆ ಕಮರ್ಷಿಯಲ್ ಆಗಲಿದ್ದು, ಎಲ್ಲಿಯಾದರೂ ಪೇ ಮಾಡಬೇಕಾದ್ರೆ ಶುಲ್ಕ ವಿಧಿಸಲಿದೆ ಎಂದು ವರದಿಯಾಗಿದೆ.
ಹೌದು, ಪೋನ್ನಂತೆ ಯುಪಿಐ ಕೂಡ ನಮ್ಮ ಜೀವನದ ಅಂಗವಾಗಿದೆ. ಒಬ್ಬ ವ್ಯಕ್ತಿಯೂ ದೈನಂದಿನ ವಹಿವಾಟಿನ ಶೇ.60 ರಿಂದ 80ರಷ್ಟು ಯುಪಿಐ ಮೂಲಕ ಪಾವತಿ ಮಾಡುತ್ತಾನೆ. ಭಾರತದಲ್ಲಿ ಪ್ರತಿದಿನ ಕೋಟ್ಯಾಂತರ ಯುಪಿಐ ವಹಿವಾಟುಗಳು ನಡೆಯುತ್ತವೆ. Paytm, Google Pay ಮತ್ತು PhonePe ಹೆಚ್ಚು ಬಳಸಲ್ಪಡುತ್ತವೆ. ಈ ಕಂಪನಿಗಳಲ್ಲಿ ಹೆಚ್ಚಿನವು UPI ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ಈಗ ಈ ಉಚಿತ ಸೇವೆಗಳು ಶೀಘ್ರದಲ್ಲೇ ನಿಲ್ಲಬಹುದು. ಈಗ ನೀವು ವಿವಿಧ ಸೇವೆಗಳಿಗೆ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ವರದಿ ಉಲ್ಲೇಖವಾಗಿದೆ.
ಈ ಕಂಪನಿಗಳು ಈಗಾಗಲೇ UPI ಮೂಲಕ ಮೊಬೈಲ್ ರಿಚಾರ್ಚ್ ಮಾಡಲು ಶುಲ್ಕ ವಿಧಿಸಿದೆ. ಈ ಪ್ರಕ್ರಿಯೆ ಆರಂಭವಾಗಿದ್ದು, ಇದು ಮೊಬೈಲ್ ರಿಚಾರ್ಚ್ಗೆ ಸೀಮಿತವಾಗಿಲ್ಲ. ಗೂಗಲ್ ಅದನ್ನು ಪ್ರಾರಂಭಿಸಿದೆ. ಇನ್ನು ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ವಿದ್ಯುತ್ ಬಿಲ್ ಪಾವತಿಸಲು ಗೂಗಲ್ ಪೇ ಅನುಕೂಲಕರನ ಶುಲ್ಕದ ಹೆಸರಲ್ಲಿ ಗ್ರಾಹಕರಿಂದ 15 ರೂ. ವಿಧಿಸಿದೆ. ವರದಿಯ ಪ್ರಕಾರ, ಬಳಕೆದಾರರು ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಪಾವತಿಸಿದ್ದಾರೆ.
ಗೂಗಲ್ ಪೇ ಈ ಪ್ರಕ್ರಿಯೆಯನ್ನು "ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕ" ಇದರಲ್ಲಿ ಜಿಎಸ್‌ಟಿ ಸೇರಿದೆ ಎಂದು ವಿವರಿಸಿದೆ. ಇನ್ನು UPI ಅನ್ನು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾತ್ರವಲ್ಲದೆ ಇತರ ಹಲವು ಸೇವೆಗಳಿಗೂ ಬಳಸಲಾಗುತ್ತಿದೆ.(ಏಜೆನ್ಸೀಸ್)