119 ಆ್ಯಪ್​​ಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ!; ನಿಮ್ಮ ಫೋನ್​​ನಲ್ಲಿ ಈ ಅಪ್ಲಿಕೇಶನ್​ಗಳಿವೆಯೇ ಚೆಕ್​ ಮಾಡ್ಕೊಳ್ಳಿ | Banned

dk - 2025-02-20T152413.741
Published on

Banned: ಗೂಗಲ್​ ಸ್ಟೋರ್​ನಿಂದ ಡೌನ್​ಲೋಡ್​ ಆಗುತ್ತಿರುವ 119 ವಿದೇಶಿ ಆ್ಯಪ್​ಗಳನ್ನು ಕೇಂದ್ರ ಸರ್ಕಾರ ನಿರ್ಬಂಧ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟುಮಾಡುವ ವಿಷಯಗಳನ್ನು ಉಲ್ಲೇಖಿಸಿ ನಿರ್ಬಂಧ ಹೇರಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಸಂಬಂಧ ಆದೇಶಗಳನ್ನು ಹೊರಡಿಸಿದೆ ಎಂದು ವರದಿ ಉಲ್ಲೇಖಿಸಲಾಗಿದೆ.

ಹೌದು, ಸಂಬಂಧ ಗೂಗಲ್​ ಪ್ಲೇಸ್ಟೋರ್​ಗೆ ಕೇಂದ್ರ ಸರ್ಕಾರ ನೋಟಿಸ್​ ಹೊರಡಿಸಿದೆ. ಈ 119 ಆ್ಯಪ್​ಗಳಲ್ಲಿ ವಿಡಿಯೋ ಮತ್ತು ಧ್ವನಿ ಚಾಟ್​ ಅಪ್ಲಿಕೇಶನ್​ಗಳಾಗಿವೆ. ಇನ್ನು ಈ ನಿರ್ಬಂಧಿಸಲು ಅದೇಶಿಸಿರುವ ಅಪ್ಲಿಕೇಶನ್​ಗಳು ಚೀನಾ,  ಹಾಂಕಂಗ್​, ಸಿಂಗಾಪುರ, ಅಮೆರಿಕಾ, ಯುಕೆ ಮತ್ತು ಆಸ್ಟ್ರೇಲಿಯಾ ಸೇರಿ ಇತರ ವಿದೇಶಿಗಳಿಗೆ ಸಂಬಂಧಿಸಿವೆ. ಆದೇಶ ಹೊರತಾಗಿಯೂ ಇಲ್ಲಿವರಿಗೆ 119 ಆ್ಯಪ್​ಗಳಲ್ಲಿ 15 ಅಪ್ಲಿಕೇಶನ್​ಗಳನ್ನು ತಗೆದು ಹಾಕಲಾಗಿದೆ. ಉಳಿದವೂ ಇನ್ನು ಡೌನ್​ಲೋಡ್​ಗೆ ಲಭ್ಯವಿದೆ.

ಈ ಅಪ್ಲಿಕೇಶನ್ ಡೆವಲಪರ್​ಗಳು ಗೂಗಲ್​ನಿಂದ ಮಾಹಿತಿ ಬಂದಿದ್ದು, ಆ್ಯಪ್​ಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಇನ್ನು ನಿರ್ಬಂಧಿಸಲಾಗುವ ಅಪ್ಲಿಕೇಶನ್‌ಗಳಲ್ಲಿ ಚಾಂಗ್‌ಆ್ಯಪ್, ಹನಿಕ್ಯಾಮ್ ಮತ್ತು ಚಿಲ್‌ಚಾಟ್ ಸೇರಿವೆ.

ಈ ಹಿಂದೆಯೂ ಸಹ ಆ್ಯಪ್​ಗಳು ಬ್ಯಾನ್​ ಮಾಡಿದ್ದ ಸರ್ಕಾರ

2020ರಲ್ಲಿ ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚಾದ ಬಳಿಕ ಭಾರತ ಸರ್ಕಾರವು ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿ ಆದೇಶ ಮಾಡಿತ್ತು. ಇವುಗಳಲ್ಲಿ ಟಿಕ್​ಟಾಕ್​ ಮತ್ತು ಪಬ್​ ಜಿ ಗೇಮ್​ ಸೇರಿದಂತೆ ಅನೇಕ ಅಪ್ಲಿಕೇಶನ್​ಗಳನ್ನು ಬಂದ್​ ಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net