

Alcohol:ಇತ್ತೀಚಿನ ದಿನಗಳಲ್ಲಿ ನಕಲಿ ಆಲ್ಕೋಹಾಲ್ ಸೇವಿಸಿ ಬಲಿಯಾಗುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತೀವೆ. ಅಲ್ಲದೆ, ಇದರಲ್ಲಿ ನಕಲಿ ಮತ್ತು ಅಸಲಿ ಯಾವುದು ಎನ್ನುವುದು ಬಹತೇಕರಿಗೆ ಸ್ಪಷ್ಟತೆ ಸಿಕ್ಕುತ್ತಿಲ್ಲ. ಹೀಗಾಗಿ, ಅವುಗಳನ್ನು ಕಂಡು ಹಿಡಿಯೋದೇಗೆ ಎಂಬುವುದನ್ನು ತಜ್ಞರೊಬ್ಬರು ವಿವರಿಸಿದ್ದಾರೆ.
ಹೌದು, ವಿಸ್ಕಿ ತಜ್ಞ ಡೇನಿಯಲ್ ಉಫ್ಲ್ಯಾಂಡ್ ಎಂಬುವವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದರ ಜತೆ ಮದ್ಯವೆಸನಿಗಳ ಸಾವಿಗೆ ಕಾರಣವಾದ ಅಂಶ ಏನು ಎಂಬುವುದರ ಬಗ್ಗೆ ಕೂಡ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ ಸೇರಿದಂತೆ ಗ್ರಿಸ್, ಟರ್ಕಿ, ಆಗ್ನೆಯ ಏಷ್ಯಾಗಳಲ್ಲಿ ನಕಲಿ ಆಲ್ಕೋಹಾಲ್ನಿಂದಾ ಮರಣ ಪ್ರಮಾಣ ಅಧಿಕವಾಗಿದೆ. ಇದು ಅತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿರುವ ಉಫ್ಲ್ಯಾಂಡ್, ನಮಗೆ ತಿಳಿಯದಂತೆ ಆಲ್ಕೋಹಾಲ್ನಲ್ಲಿ ಮಿಶ್ರಣವಾದ 'ಮೇಥನಾಲ್' ಎಂಬ ದ್ರವದಿಂದ ಸಾವುಗಳಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ಈ ಕುರಿತು ಅಧ್ಯಯನ ಮಾಡಿರುವ ಅವರು, ಮೆಥನಾಲ್ ಬಣ್ಣರಹಿತ ದ್ರವವಾಗಿದ್ದು, ಇದು ಮದ್ಯದ ವಾಸನೆಯನ್ನು ಹೋಲುತ್ತದೆ ಆದರೆ ಉತ್ಪಾದಿಸಲು ತುಂಬಾ ಅಗ್ಗವಾಗಿದೆ. ಹೀಗಾಗಿ, ಇದನ್ನು ಆಲ್ಕೋಹಾಲ್ನಲ್ಲಿ ಮಿಕ್ಸ್ ಮಾಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ದೇಹವು ಮೆಥನಾಲ್ ಅನ್ನು ವಿಭಜಿಸಿದಾಗ, ಅದು ಜೀವಕೋಶಗಳನ್ನು ಕೊಲ್ಲುವ ವಿಷಕಾರಿ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಇದು ಅಂಗಗಳಿಗೆ ಹಾನಿಯಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಸಾವಿಗೆ ಕಾರಣವಾಗುತ್ತದೆ. ಮೆಥನಾಲ್ ಬೆರೆಸಿದ ಮದ್ಯದ ಒಂದೇ ಒಂದು ಗುಂಡು ಸಾಕು ಸಾವಿಗೆ ಎಂದು ಅತಂಕಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ.
ಗ್ಲಾಸ್ಗೆ ಮದ್ಯ ಸುರಿಯುವ ಮೊದಲೇ ಬಾಟಲಿಯ ಮೇಲಿನ ಪ್ಯಾಕೇಜಿಂಗ್ ಗಮನಿಸಬೇಕು. ಇದರಲ್ಲಿ ಪ್ಯಾಕ್‌ಗಳು ಕಳಪೆ-ಗುಣಮಟ್ಟದ ಲೇಬಲ್‌ಗಳು, ಕಾಗುಣಿತ ದೋಷಗಳು ಅಥವಾ ಮಸುಕಾದ ಪಠ್ಯವನ್ನು ಹೊಂದಿರಬಹುದು.
ಸೀಲ್ ಮುರಿದುಹೋದ ಅಥವಾ ತಿದ್ದುಪಡಿ ಮಾಡಲ್ಪಟ್ಟಿರುವಂತೆ ಕಂಡುಬರುವ ಬಾಟಲಿಗಳು ಸಹ ಎಚ್ಚರಿಕೆಯ ಚಿಹ್ನೆಗಳಾಗಿವೆ.
ಅನುಮಾನಾಸ್ಪದ ವಾಸನೆ ಬಂದರೆ, ಒಂದು ಸಿಪ್ ಕೂಡ ಕುಡಿಯದಿರುವುದು ಉತ್ತಮ ಎಂದು ತಜ್ಞ ಉಫ್ಲ್ಯಾಂಡ್ ಒತ್ತಿ ಹೇಳಿದ್ದಾರೆ.
ಇದು ಉಗುರು ಬಣ್ಣ ಅಥವಾ ಬಣ್ಣ ತೆಳುಗೊಳಿಸುವಂತೆಯೇ ರಾಸಾಯನಿಕ ವಾಸನೆಯನ್ನು ಹೊರಸೂಸಬಹುದು ಇದನ್ನು ಗುರುತಿಸಿ.(ಏಜೆನ್ಸೀಸ್)