ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ದಲಿತನು ಅಂಬೇಡ್ಕರ್ ಇದ್ದಂತೆ: Rahul Gandhi

Rahul Gandhi
Published on

ರಾಯ್​ಬರೇಲಿ: ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ದಲಿತನು ಅಂಬೇಡ್ಕರ್ ಇದ್ದಂತೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ರಾಯ್​ಬರೇಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಸಾವಿರಾರು ವರ್ಷಗಳಿಂದ ದಲಿತರು ತಾರತಾಮ್ಯವನ್ನು ಎದುರಿಸಿದ್ದು, ಅಂಬೇಡ್ಕರ್ ಅವರು ದಲಿತರು ಅನುಭವಿಸಿದ ತಾರತಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂವಿಧಾನವನ್ನು ಸಿದ್ದಪಡಿಸುವ ಮೂಲಕ ದಲಿತರಿಗೆ ಅಧಿಕಾರವನ್ನು ನೀಡಿದರು. ಹೀಗಾಗಿ ದೇಶದಲ್ಲಿರುವ ಪ್ರತಿಯೊಬ್ಬ ದಲಿತನೂ ಅಂಬೇಡ್ಕರ್‌ ಇದ್ದಂತೆ ಎಂದು ಹೇಳಿದ್ದಾರೆ.

ಸಂವಿಧಾನವನ್ನು ಕಿತ್ತು ಹಾಕಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಸಂವಿಧಾನವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅಂಬೇಡ್ಕರ್ ಅವರು ದಲಿತರು ಶಿಕ್ಷಿತರಾಗಬೇಕು ಮತ್ತು ಸಂಘಟಿತರಾಗಬೇಕು ಎಂದು ಬಯಸಿದ್ದರು. ಇಂದು ಸಂವಿಧಾನದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ.

ದೇಶದ ಜನಸಂಖ್ಯೆಯಲ್ಲಿ ದಲಿತರು ಶೇ. 15ರಷ್ಟು ಪಾಲನ್ನು ಹೊಂದಿದ್ದು, ದೇಶದ ಉನ್ನತ ಕಂಪನಿಗಳ ಸಿಇಒ ಮತ್ತು ಮಾಲೀಕರು ಆ ಅನುಪಾತದಲ್ಲಿಲ್ಲ ಎಂದು ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net