ಕುಡಿದ ಮತ್ತಿನಲ್ಲಿ Police ಇನ್ಸ್​ಪೆಕ್ಟರ್​ ಅಸಭ್ಯ ವರ್ತನೆ; Viral Video ಕುರಿತು ಅಧಿಕಾರಿಗಳು ಹೇಳಿದ್ದಿಷ್ಟು

Cop Misbehave
Published on

ಲಖನೌ: ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು (Police Officer) ಮಹಿಳೆಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿರುವ ಘಟನೆ ಉತ್ತರಪ್ರದೇಶದ ಕಸ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಕಿರುಕುಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕುಡಿದ ಮತ್ತಿನಲ್ಲಿರುವ ಪೊಲೀಸ್ ಅಧಿಕಾರಿಯು (Police Officer) ಮಹಿಳೆಯೊಬ್ಬರ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ನೋಡಬಹುದಾಗಿದೆ. ಆಕೆ ಪ್ರತಿರೋಧ ತೋರಿದರು ಸುಮ್ಮನಾಗದ ಅಧಿಕಾರಿಯು ಮತ್ತಷ್ಟು ಕಿರುಕುಳ ನೀಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಘಟನೆ ಕುರಿತು ಮಾತನಾಡಿರುವ ಕಸ್​ಗಂಜ್​​ ಎಎಸ್​ಪಿ, ಘಟನೆ ಸಂಬಂಧ ಪೊಲೀಸ್ ಇನ್ಸ್​ಪೆಕ್ಟರ್​ನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಸಂತ್ರಸ್ತೆಯು ಆತನ ಪತ್ನಿ ಎಂದು ತಿಳಿದು ಬಂದಿದ್ದು, ಕರ್ತವ್ಯದ ವೇಳೆ ಈ ರೀತಿ ಮಾಡಿರುವುದು ಶಿಕ್ಷಾರ್ಹಾ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯ ನಡೆಗೆ ನೆಟ್ಟಿಗರು ಕಿಡಿಕಾರಿದ್ದು, ಇಂತಹ ಪೊಲೀಸರನ್ನು (Police Officer) ಕೇವಲ ಅಮಾನತು ಮಾಡಿದರೆ ಸಾಲದು, ಎಲ್ಲೋ ವರ್ಗಾವಣೆಗೊಂಡು ತಮ್ಮ ಅಶ್ಲೀಲ ವರ್ತನೆಯನ್ನು ಮುಂದುವರಿಸುತ್ತಾರೆ. ಒಬ್ಬ ಪೊಲೀಸ್ ಅಧಿಕಾರಿಯೇ ಹೀಗೆ ನಡೆದುಕೊಂಡರೆ ಇನ್ನೂ ಆರೋಪಿಗಳ ಕಥೆಯೇನು ಎಂದು ಕಿಡಿಕಾರಿ ಕಮೆಂಟ್ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net