More

    ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಖಾತ ನಟಿ, ಮಾಡೆಲ್​ ಬಂಧನ

    ಪುಣೆ: ಮೇಜರ್​ ಆಪರೇಷನ್​ ಒಂದರಲ್ಲಿ ಪುಣೆಯ ವಾಕಡ್​ ಏರಿಯಾದ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪಿಂಪ್ರಿ ಚಿಂಚವಾಡ್​ ಕ್ರೈಂ ಬ್ರಾಂಚ್​ ತಂಡ ಭೇದಿಸಿದೆ. ಈ ವೇಳೆ ಖ್ಯಾತ ಭೋಜ್​ಪುರಿ ನಟಿ ಮತ್ತು ಓರ್ವ ಮಾಡೆಲ್​ ಅನ್ನು ಏಜೆಂಟ್​ನೊಂದಿಗೆ ಬಂಧಿಸಲಾಗಿದೆ.

    ವೇಶ್ಯಾವಾಟಿಕೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಲಾಗಿದೆ. ಅಕ್ರಮ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಸಂಜೆ ಹೊಟೇಲ್ ಮೇಲೆ ದಾಳಿ ನಡೆಸಿದರು. ಈ ವೇಳೆ ಮಾಡೆಲ್ ಹಾಗೂ ಭೋಜ್​ಪುರಿಯ ಖ್ಯಾತ ನಟಿಯೊಬ್ಬರು ಸ್ಥಳದಲ್ಲಿದ್ದರು. ಇಬ್ಬರು ದಂಧೆಯಲ್ಲಿ ತೊಡಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಅಮಾಯಕ ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಗ್ರಾಹಕರಿಂದ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನದವರೆಗೆ 15 ಸಾವಿರ ರೂ.ನಂತೆ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಅಂಬಲಿ ಹಳಸೀತು ಕಂಬಳಿ ಬೀಸೀತಲೇ ಪರಾಕ್! ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ

    ನಗರದಲ್ಲಿ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಮತ್ತು ಅಂತಹ ಅಪರಾಧಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಪಿಂಪ್ರಿ ಚಿಂಚ್‌ವಾಡ್ ಕ್ರೈಂ ಬ್ರಾಂಚ್ ಬಲವಾದ ಸಂದೇಶವನ್ನು ದಂಧೆಕೋರರಿಗೆ ರವಾನಿಸಿದೆ.

    ಪೊಲೀಸ್ ಇನ್ಸ್‌ಪೆಕ್ಟರ್ ದೇವೇಂದ್ರ ಚವಾಣ್ ಪ್ರಕಾರ, ಭೋಜ್‌ಪುರಿ ನಟಿ ಮತ್ತು ಮಾಡೆಲ್​ ಒಬ್ಬಳು ಪಂಚತಾರಾ ಹೋಟೆಲ್‌ನಲ್ಲಿ ಏಜೆಂಟ್‌ನೊಂದಿಗೆ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ನಮಗೆ ಸುಳಿವು ಸಿಕ್ಕಿತು. ಬಳಿಕ ತನಿಖೆಗೆಂದು ನಕಲಿ ಗ್ರಾಹಕರನ್ನು ಹೋಟೆಲ್​ಗೆ ಕಳುಹಿಸಿದೆವು. ಅದಕ್ಕೂ ಮುನ್ನ ಏಜೆಂಟ್ ಅನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸಲಾಯಿತು. ಪಂಚತಾರಾ ಹೋಟೆಲ್‌ನಲ್ಲಿ ರೂಂ ಬುಕ್ ಮಾಡುವಂತೆ ಏಜೆಂಟ್​ಗೆ ಸೂಚಿಸಿದ ಬಳಿಕ ನಟಿ ಮತ್ತು ಮಾಡೆಲ್‌ನ ಫೋಟೋಗಳನ್ನು ನಕಲಿ ಗ್ರಾಹಕರ ಜತೆ ಹಂಚಿಕೊಳ್ಳಲಾಯಿತು. ಬಳಿಕ ವೇಶ್ಯಾವಾಟಿಕೆ ನಡೆಯುತ್ತಿರುವುದು ಖಚಿತವಾದ ಬಳಿಕ ದಾಳಿ ನಡೆಸಿ ಎಲ್ಲರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಾಲಿವುಡ್​ ನಟಿ!

    ಕರ್ನಾಟಕ ಚುಣಾವಣಾ ರಣಕಣದಲ್ಲಿ ವರ್ಕೌಟ್ ಆಯಿತೇ ತಾರಾ ಪ್ರಚಾರ?

    ಸ್ನೇಹಿತರನ್ನು ರಕ್ಷಿಸಲು ಹೋಗಿ ಪ್ರಾಣಕಳೆದುಕೊಂಡ ಬಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts