ದೆಹಲಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಈ ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಗೂ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಆಪ್ ಪಕ್ಷದ ಸಂಸದನಾಗಿರುವ ರಾಘವ್ ಚಡ್ಡಾ ಜತೆ ಅವರಿಗೆ ಪ್ರೇಮಾಂಕುರವಾಗಿತ್ತು.
ಇದನ್ನೂ ಓದಿ: ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್! ನಿಜವಾಯಿತು ಮೈಲಾರಲಿಂಗನ ಭವಿಷ್ಯವಾಣಿ
ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬಹುದಿನಗಳಿಂದ ಒಟ್ಟಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಕುರಿತು ಅನೇಕ ಗಾಸಿಪ್ಗಳು ಕೇಳಿ ಬಂದಿದ್ದವು.ಈ ಬೆನ್ನಲ್ಲೇ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡು ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಕಪೂರ್ತಲ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿಯು ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಈ ಜೋಡಿಗೆ ನಟ ನೀಲ್ ನಿತಿನ್ ಮುಕೇಶ್, ರಣ್‌ವೀರ್ ಸಿಂಗ್, ಕಪಿಲ್ ಶರ್ಮಾ, ಅನುಷ್ಕಾ ಶರ್ಮಾ,ನೇಹಾ ಧೂಪಿಯಾ, ಸೈನಾ ನೆಹ್ವಾಲ್, ಅಥಿಯಾ ಶೆಟ್ಟಿ, ಮನೀಶ್ ಮಲ್ಹೋತ್ರಾ, ನೀಲ್ ನಿತಿನ್ ಮುಕೇಶ್ ಮುಂತಾದ ಗಣ್ಯರು ಶುಭ ಹಾರೈಸಿದ್ದಾರೆ. ನಿಶ್ಚಿತಾರ್ಥ ಪೋಟೊಗಳನ್ನು ನಟಿ ಪರಿಣಿತಿ ಚೋಪ್ರಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್)