More

    ಭಾರತಕ್ಕೆ ಮರುಪ್ರವೇಶಿಸಿದ ಪ್ರಸಿದ್ಧ ಮೊಬೈಲ್ ಗೇಮ್​: BGMI ಡೌನ್​ಲೋಡ್​ಗೆ ಲಭ್ಯ

    ದೆಹಲಿ: ಕೆಲವು ತಿಂಗಳುಗಳ ಹಿಂದೆ ಎಲ್ಲ ವಯೋಮಾನದವರಿಗೆ ಪ್ರಿಯವಾಗಿದ್ದ BGMI ಗೇಮ್​ನ್ನು ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಆದೇಶದ ಮೆರೆಗೆ ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಸದ್ಯ, ಬ್ಯಾಟಲ್ ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಗೇಮ್ ಭಾರತಕ್ಕೆ ಮರುಪ್ರವೇಶಿಸಿದೆ.

    ಇದನ್ನೂ ಓದಿ: ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ!

    ಈ ಗೇಮ್ ಹಲವು ಬದಲಾವಣೆಗಳೊಂದಿಗೆ ಮರಳಿದ್ದು, ಪ್ಲೇ ಸ್ಟೋರ್​​​​ನಿಂದ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹಳೆಯ ಖಾತೆಗೆ ನೇರ ಪ್ರವೇಶ ಪಡೆಯಬಹುದಾಗಿದೆ. ಈ ಆಟವನ್ನು ಆಡಲು ಸಮಯದ ಮಿತಿಯನ್ನು ನಿಗದಿಪಡಿಸಲಾಗಿದ್ದು, 18 ವರ್ಷದೊಳಗಿನವರು ದಿನಕ್ಕೆ 3 ಗಂಟೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರು ದಿನಕ್ಕೆ 6 ಗಂಟೆ ಆಡಬಹುದಾಗಿದೆ.

    ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ(BGMI) ಗೇಮ್ ಅಪ್ಲಿಕೇಶನ್‌ನ ತಯಾರಕರಾದ ಕ್ರಾಫ್ಟಾನ್ ತನ್ನ ಜನಪ್ರಿಯ ಆಟವಾದ BGMI ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತೀಯ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts