Bengaluru Rains: ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ.22 ರವರೆಗೆ ಭಾರೀ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂತೆಯೇ ತಡರಾತ್ರಿ (ಮೇ.19) ಸುರಿದ ಧಾರಕಾರ ಮಳೆಗೆ ಬೆಂಗಳೂರಿನ ಹಲವು ನಗರಗಳು ಜಲಾವೃತಗೊಂಡಿದ್ದು, ನಗರ ನಿವಾಸಿಗಳು ಮಳೆ ಅವಾಂತರಕ್ಕೆ ತತ್ತರಿಸಿ ಹೋಗಿದ್ದಾರೆ.

ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತಹಳ್ಳಿ ಹೊರಮಾವು, ಹೆಬ್ಬಾಳ, ವಿಲ್ಸನ್ ಗಾರ್ಡನ್, ಎಚ್ಎಸ್ಆರ್ ಲೇಔಟ್ ಸೇರಿದಂತೆ ಹಲವು ನಗರ ಪ್ರದೇಶಗಳು ಭಾರೀ ಮಳೆಗೆ ಕೆರೆಯಂತಾಗಿವೆ. ಎಲ್ಲರೂ ಮಲಗಿರುವ ವೇಳೆ ಸುರಿದ ಬಿರುಸಿನ ಮಳೆಗೆ ಮನೆಯ ಹೊರಗೆ ನಿಲುಗಡೆ ಮಾಡಿದ್ದ ಲಕ್ಷಾಂತರ ರೂ. ಬೆಲೆಬಾಳುವ ಕಾರು, ಬೈಕ್ಗಳು ನೀರಿನಲ್ಲಿ ಸಿಲುಕಿವೆ. ಇದು ಜನರನ್ನು ಅಕ್ಷರಶಃ ಕೆರಳಿಸಿದೆ.
ಮಳೆಗೆ ಬಡಾವಣೆ ನಿವಾಸಿಗಳು ತತ್ತರಿಸಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಪ್ರವಾಹದಂತೆ ವಸತಿ ಪ್ರದೇಶ ಮತ್ತು ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಮನೆಯ ಟೇರೆಸ್ ಮತ್ತು ಬಾಲ್ಕನಿಗಳ ಮೇಲೆ ನಿವಾಸಿಗಳು ಸಮಯ ಕಳೆದಿದ್ದು, ಅನ್ನ, ನೀರು, ಆಹಾರ ಔಷಧಿಗಳು ಸಿಗದೆ ಹೈರಣಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಕಾರು, ಬೈಕ್, ಎಲೆಕ್ಟ್ರಾನಿಕ್ ವಸ್ತುಗಳು, ದವಸ ಧಾನ್ಯಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ. ಸ್ಥಳಕ್ಕೆ ಧಾವಿಸಿರುವ ಬಿಬಿಎಂಪಿ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ನೀರು ನಿಂತಿರುವ ಪ್ರದೇಶಗಳಲ್ಲಿ ನಿವಾಸಿಗಳನ್ನು ಮನೆಗಳಿಂದ ಸುರಕ್ಷಿತವಾಗಿ ಹೊರತರಲು ಬೋಟ್ ಮತ್ತು ಟ್ರಾಕ್ಟರ್, ಜೆಸಿಬಿಗಳನ್ನು ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: ಜಯನಗರ ವಿನಾಯಕಸ್ವಾಮಿ ದೇವಾಲಯದಲ್ಲಿ48ನೇ ವಾರ್ಷಿಕೋತ್ಸವ; ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಕೆಲವರು ಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯರ ತಂಡದಿಂದ ತುರ್ತು ವೈದ್ಯಕೀಯ ತಪಾಸಣೆ ವ್ಯವಸ್ಥೆ ಕೂಡ ಮಾಡಲಾಯಿತು. ಬಿಬಿಎಂಪಿ ಸಿಬ್ಬಂದಿ, ಅಗ್ನಿಶಾಮಕ ದಳ ಯಂತ್ರಗಳು, ಜೆಸಿಬಿಗಳನ್ನು ಬಳಸಿ ನೀರು ಹೊರ ಹಾಕಲು ಎಷ್ಟೇ ಪ್ರಯತ್ನಪಟ್ಟರೂ ನೀರಿನ ಮಟ್ಟ ಕಡಿಮೆಯಾಗಲಿಲ್ಲ. ಅದರಲ್ಲೂ, ಇಂದು ಮಧ್ಯಾಹ್ನದಿಂದಲೇ ಮತ್ತೆ ಮಳೆ ಆರಂಭವಾದ ಹಿನ್ನೆಲೆ ಮತ್ತಷ್ಟು ಆತಂಕ ಎದುರಾಗಿದೆ.
ಅವರಿಬ್ಬರಿಗೆ ಯಾವ ಜೆರ್ಸಿ ಬೇಕಾದರೂ ಕೊಡಿ! ರನ್ ಹೊಳೆ ಹರಿಸುವುದೇ ಇವರ ಗುರಿ: ಕೈಫ್ ಗುಣಗಾನ | IPL 2025