IPL 2025: ನಿನ್ನೆ (ಮೇ.18) ನಡೆದ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಪಡೆ, 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.

ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಂಗೀತ ನುಡಿಸಿದ್ದಕ್ಕಾಗಿ 18 ವರ್ಷದ ಬಾಲಕನಿಗೆ ಚಾಕು ಇರಿದು ಹತ್ಯೆ: ನಾಲ್ವರ ಬಂಧನ | Delhi
ಈ ಮೂಲಕ ಐಪಿಎಲ್ 18ನೇ ಆವೃತ್ತಿಯ ಪ್ಲೇಆಫ್ಗೆ ಲಗ್ಗೆಯಿಟ್ಟ ಮೊದಲನೇ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ನಾಯಕತ್ವ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ ಶುಭಮನ್ ಗಿಲ್, ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಕಾರಣರಾದರು. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 199 ಬೃಹತ್ ಗುರಿಯನ್ನು ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ ಜಿಟಿ ಗೆದ್ದು ಬೀಗಿತು.
ಸಾಯಿ ಸುದರ್ಶನ್ ( 81 ಎಸೆತ, 108 ರನ್) ಭರ್ಜರಿ ಶತಕ ದಾಖಲಿಸಿದರೆ, ಶುಭಮನ್ ಗಿಲ್ (53 ಎಸೆತ, 93) ಸ್ಫೋಟಕ ಅರ್ಧ ಶತಕ ಸಿಡಿಸಿ, ಪಂದ್ಯದ ಗೆಲುವಿಗೆ ಪ್ರಮುಖ ಕಾರಣರಾದರು. ಇವರಿಬ್ಬರ ಸತತ ಸ್ಫೋಟಕ ಇನ್ನಿಂಗ್ಸ್ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹೊಸ ಇತಿಹಾಸ ಬರೆದಿದೆ. ಈ ಆವೃತ್ತಿಯಲ್ಲಿ ಬರೋಬ್ಬರಿ 600ಕ್ಕೂ ಅಧಿಕ ರನ್ ಗಳಿಸಿರುವ ಗಿಲ್ ಮತ್ತು ಸುದರ್ಶನ್ಗೆ ಕ್ರಿಕೆಟ್ ವಲಯದಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ಹರಿದುಬರುತ್ತಿವೆ.
“ಗಿಲ್ ಮತ್ತು ಸಾಯಿ ಬ್ಯಾಟಿಂಗ್ ಒಂದು ಫ್ಯಾಶನ್ನಂತೆ. ಇವರಿಬ್ಬರಿಗೂ ಯಾವ ಜೆರ್ಸಿ ಬೇಕಾದರೂ ಕೊಡಿ, ರನ್ ಗಳಿಸುವುದೇ ಅವರ ಗುರಿ. ಜಿಟಿ, ಏಕದಿನ ಟಿ20 ಅಥವಾ ಟೆಸ್ಟ್ ಜೆರ್ಸಿ ಯಾವುದೇ ಇರಲಿ, ರನ್ಗಳ ಹೊಳೆಯನ್ನೇ ಹರಿಸುವುದು ಇವರ ಸಾಮರ್ಥ್ಯ. ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ 200 ರನ್ಗಳ ಗುರಿಯನ್ನು ಬೆನ್ನಟ್ಟಿದ ಏಕೈಕ ತಂಡ ಗುಜರಾತ್ ಟೈಟನ್ಸ್. ಇವರಿಬ್ಬರ ಬ್ಯಾಟಿಂಗ್ ನೋಡುವುದೇ ಹಬ್ಬ. ಅಲ್ಲಿ ಸಿಂಗಲ್, ಡಬಲ್ಸ್, ಸಿಕ್ಸರ್, ಬೌಂಡರಿ ಎಲ್ಲವೂ ಇತ್ತು” ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದರು,(ಏಜೆನ್ಸೀಸ್).
ಮೇ.22 ರವರೆಗೆ ವರುಣಾರ್ಭಟ; ರಾಜ್ಯದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ | IMD Alert