ಬೆಂಗಳೂರು: ಇತ್ತೀಚಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಪ್ರೈಡ್ ಮಾರ್ಚ್ನಲ್ಲಿ ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಗರದ ಕಂಠೀರವ ಕ್ರೀಡಾಂಗಣದ ಬಳಿ ನಡೆದ ಕಾರ್ಯಕ್ರಮ ವಿವಾದಕ್ಕೀಡಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ಅಜಾದಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಲ್ಲದೆ ಹಲವು ವಿಚಾರಗಳಿಗೆ ಈ ಕಾರ್ಯಕ್ರಮ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ಈ ಒಂದು ಸಿಂಪಲ್ ಕೆಲಸ ಮಾಡಿದರೆ ನಿಮಗೆ ಸಿಗಲಿದೆ ಸಲಾರ್ ಟಿಕೆಟ್
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರೈಡ್ ಬಾವುಟವನ್ನು ಹೊತ್ತು ಸಾಗುತ್ತಿರುವ ಜನರು ಹಿಂದುತ್ವ, ಬ್ರಾಹ್ಮಣವಾದ, ಮನುವಾದದಿಂದ ಅಜಾದಿ ಬೇಕೆಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ನೋಡಬಹುದಾಗಿದೆ. ಇತ್ತ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಈ ಬಗ್ಗೆ ಗರಂ ಆಗಿದ್ದು, ಈ ರೀತಿಯ ಕಾರ್ಯಕ್ರಮಗಳಲ್ಲಿ ಇಂತಹ ಘೋಷಣೆಗಳನ್ನು ಏಕೆ ಕೂಗಲಾಗುತ್ತಿದೆ. ಕೂಡಲೇ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದುತ್ವಕ್ಕೂ ಪ್ರೈಡ್ ಮಾರ್ಚ್ಗೂ ಏನಾದರೂ ಸಂಬಂಧ ಇದೆಯಾ. ಲಿಂಗ ಸಮಾನತೆ ಎಂಬ ಹೆಸರಿನಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಕೆಲವರು ಕಾರ್ಯಕ್ರಮದ ಮೂಲ ಉದ್ಧೇಶ ತಿಳಿಯದೇ ಕುರಿಗಳಂತೆ ಹಿಂಡುಗಳನ್ನು ಹಿಂಬಾಲಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.