More

  ಈ ಒಂದು ಸಿಂಪಲ್​ ಕೆಲಸ ಮಾಡಿದರೆ ನಿಮಗೆ ಸಿಗಲಿದೆ ಸಲಾರ್​ ಟಿಕೆಟ್​

  ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​ ಪ್ರಭಾಸ್ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಸಲಾರ್​ ಸಿನಿಮಾದ ಹೊಸ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಡಾರ್ಲಿಂಗ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  ಕೆ.ಜಿ.ಎಫ್, ಕಾಂತಾರದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಸಲಾರ್ ನಿರ್ಮಿಸಿದ್ದು, ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸುತ್ತಿದೆ.

  ಸಲಾರ್​ ಚಿತ್ರದ ಮೇಲೆ ಪ್ರಭಾಸ್​ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಚಿತ್ರವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ. ಆದರೆ, ಟಿಕೆಟ್​ ಸಿಗುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಫಿಲಂಸ್​ ಸುಲಭವಾದ ದಾರಿ ಒಂದನ್ನು ತೋರಿಸಿದ್ದು, ಇಷ್ಟು ಮಾಡಿದರೆ ಸಾಕು ಎಂದು ಹೇಳಿದೆ.

  ಇದನ್ನೂ ಓದಿ: ಟಿ-20 ವಿಶ್ವಕಪ್​ಗೆ ಮೊದಲ ಬಾರಿಗೆ ಅರ್ಹತೆ; ಇತಿಹಾಸ ಸೃಷ್ಟಿಸಿದ ಉಗಾಂಡ

  ಹೊಂಬಾಳೆ ಫಿಲಂಸ್​ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಚಂದದ ಕ್ಯಾಪ್ಷನ್​ ನೀಡಲು ಸೂಚಿಸಲಾಗಿದೆ. ಕಮೆಂಟ್​ ಮಾಡುವ ಮೂಲಕ ಎಲ್ಲರೂ ಕ್ಯಾಪ್ಷನ್​ ನೀಡಬಹುದು. ಅತ್ಯುತ್ತಮ ಕ್ಯಾಪ್ಷನ್​ ನೀಡುವ 5 ಮಂದಿಗೆ ಸಲಾರ್​ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್​ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

  ಇತ್ತ ಹೊಂಬಾಳೆ ಫಿಲಂಸ್​ ಪೋಸ್ಟ್​ ಹೊರಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ಕಮೆಂಟ್​ ಮಾಡುತ್ತಿದ್ದಾರೆ. ಒಂದು ಗಂಟೆಯೊಳಗೆ ಸಾವಿರಾರು ಕಮೆಂಟ್​ಗಳು ಬಂದಿದ್ದು, ಚಿತ್ರತಂಡ ಶೀಘ್ರದಲ್ಲೇ ವಿಜೇತರನ್ನು ಘೋಷಿಸಲಿದೆ. ಸಲಾರ್ ಚಿತ್ರ ಡಿಸೆಂಬರ್ 22 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

  ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್​ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಕೆಲಸ ಮಾಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts