ಸತಿ ಛಾಯಾಪ್ರತಿಕೃತಿ ಜತೆ ಪತಿ 25ರ ಸಂಭ್ರಮ!; ಅಗಲಿದ ಪತ್ನಿಯ ನೆನಪಿನಲ್ಲಿ ಆಚರಣೆ: ನೂರಾರು ಮಂದಿ ಭಾಗಿ

1 Min Read
Suma ChandraShekar
ಪತ್ನಿ ಸುಮಾ ಛಾಯಾಪತಿಕೃತಿ ಜತೆ ಪತ್ನಿ ಆಶಯದಂತೆ ವಿವಾಹ ಮಹೋತ್ಸವ ಬೆಳ್ಳಿಹಬ್ಬ ಆಚರಿಸಿಕೊಂಡು ಪತಿ ಚಂದ್ರಶೇಖರ ಹಾಗೂ ಮಕ್ಕಳಾದ ಅಭಿನೇಹಾ, ಅನಿಲೇಖಾ.

ಕುಂದಾಪುರ: ಪತ್ನಿ ನೆನಪಿಗಾಗಿ ಪತಿಯ ಪ್ರೀತಿ, ತ್ಯಾಗ ರಾಮಾಯಣ ಮಹಾಭಾರತ ಕಾಲದಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಯುಗದವರಿಗೂ ಸಾಗಿಬಂದಿದೆ. ಪತ್ನಿ ನೆನಪಿಗಾಗಿ ಮನೆಯಲ್ಲೇ ಪತ್ನಿಯ ಮೇಣದ ಪ್ರತಿಕೃತಿ ಇಟ್ಟುಕೊಂಡವರೂ ಇದ್ದಾರೆ. ಇಲ್ಲೊಬ್ಬರು ದಾಂಪತ್ಯ ಜೀವನದ ಬೆಳ್ಳಿಹಬ್ಬ ಪತ್ನಿ ಬಯಕೆಯಂತೆ ನಡೆಸಿ, ಮಾದರಿ ಪತಿ ಪಟ್ಟಿಗೆ ಸೇರಿದ್ದಾರೆ.

ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನ ಬುಧವಾರ ಇಂತಹದ್ದೊಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಅಗಲಿದ ಪತ್ನಿ ಬಯಕೆಯಂತೆ ದಾಂಪತ್ಯ ಜೀವನದ 25ರ ಸಂಭ್ರಮ ಪತ್ನಿ ಛಾಯಾಪ್ರತಿಕೃತಿ ಜತೆ ಆಚರಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Suma ChandraShekar

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ; ಡಿ. 05ರಂದು ಸರ್ವಪಕ್ಷ ಶಾಸಕರ ಸಭೆ: ಕೂಡಲಸಂಗಮ ಶ್ರೀ

ಕುಂದಾಪುರ ಸಪ್ತಗಿರಿ ಕೋ-ಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಸಂಪ್ರದಾಯಕ್ಕೆ ಮುನ್ನುಡಿ ಬರೆದವರು. ಮಹೋತ್ಸವದ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಅವರ ಸಲಹೆಯನ್ನು ಪತಿ ಪಾಲಿಸಿದ್ದಾರೆ. ಪತ್ನಿ ಸುಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಚಂದ್ರಶೇಖರ್ ಪತ್ನಿ ಅಭಿಲಾಷೆ ಈಡೇರಿಸಿ ಮಾದರಿ ಪತಿಯಾಗಿದ್ದಾರೆ.

ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ಸಭಾಂಗಣ ಮಂಟಪದಲ್ಲಿ ಪತ್ನಿಯಷ್ಟೇ ಆಳೆತ್ತರದ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸುಮಾ ಛಾಯಾಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿತ್ತು. ಭಾಗವಹಿಸಿ ಹಾರೈಸಿದವರ ಕಣ್ಣಂಚಿನಲ್ಲಿ ನೀರಿದ್ದರೂ ಪತಿಯ ಬದ್ಧತೆಗೊಂದು ಮೆಚ್ಚುಗೆಯೂ ಇತ್ತು ಎನ್ನೋದು ವಿಶೇಷ.

See also  ಚೀನಾದಲ್ಲಿ ದಿನದಿಂದ ದಿನಕ್ಕೆ ನ್ಯುಮೋನಿಯಾ ಹೆಚ್ಚಳ; ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗಳು ಭರ್ತಿ
Share This Article