More

    ಟಿ-20 ವಿಶ್ವಕಪ್​ಗೆ ಮೊದಲ ಬಾರಿಗೆ ಅರ್ಹತೆ; ಇತಿಹಾಸ ಸೃಷ್ಟಿಸಿದ ಉಗಾಂಡ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್​ಗೆ ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ಶುರುವಾಗಿದ್ದು, ಉಗಾಂಡ ತಂಡವು ಪುರುಷರ ಟಿ-20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ.

    ಉಗಾಂಡ ಆಡಿರುವ ಆರು ಟಿ-20 ಪಂದ್ಯಗಳ ಪೈಕಿ ಐದರಲ್ಲಿ ಜಯ ಗಳಿಸಿದ್ದು, ಈ ಮೂಲಕ ಉಗಾಂಡ ಟಿ-20 ವಿಶ್ವಕಪ್​ನಲ್ಲಿ ಭಾಗವಹಿಸುತ್ತಿರುವ ಆಫ್ರಿಕಾ ಖಂಡದ ಐದನೇ ರಾಷ್ಟ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.

    ಇಂದು RWA ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಉಗಾಂಡ ತಂಡವು ಎದುರಾಳಿ ಪಡೆಯನ್ನು 65 ರನ್​ಗಳಿಗೆ ಕಟ್ಟಿ ಹಾಕಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಉಗಾಂಡ ತಂಡವು 8.1 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 66 ರನ್​ಗಳಿಸಿ ಗೆಲುವಿನ ನಗೆ ಬೀರಿತ್ತು.

    ಇದನ್ನೂ ಓದಿ: VIDEO| ವೈರಲ್​ ಆಗುವ ಭರದಲ್ಲಿ ಅಪಾಯಕಾರಿ ಸ್ಟಂಟ್​; ಸವಾರಿನಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಅರ್ಹತೆ ಪಡೆದಿರುವ ತಂಡಗಳು

    ಅಮೆರಿಕ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಕೆನಡಾ, ನೇಪಾಳ, ಒಮನ್ ನಮೀಬಿಯಾ ಮತ್ತು ಉಗಾಂಡ ತಂಡಗಳು ಇಲ್ಲಿಯವರೆಗೆ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿವೆ.

    ಈ ಬಾರಿಯ ಟೂರ್ನಿಯ ಆರಂಭದಲ್ಲಿ ತಲಾ ಐದು ತಂಡಗಳ ನಾಲ್ಕು ಗುಂಪುಗಳು ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಗೆ ಮುನ್ನಡೆಯುತ್ತವೆ. ಅಲ್ಲಿಂದ ಮತ್ತೆ ಸೂಪರ್ 8 ರ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. 2024ರ ಟಿ20 ವಿಶ್ವಕಪ್‌ಗಾಗಿ ಆಫ್ರಿಕಾ ವಲಯದ ಅರ್ಹತಾ ಪಂದ್ಯಗಳನ್ನು 7 ತಂಡಗಳ ನಡುವೆ ಆಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts