

ನವದೆಹಲಿ: ಭಾರತ ಸೇರಿ ಹಲವು ದೇಶಗಳಲ್ಲಿ ಕರೊನಾ ಇನ್ನಿಲ್ಲದ ವೇಗದಲ್ಲಿ ವ್ಯಾಪಿಸುತ್ತಿದೆ. ನಮ್ಮಲ್ಲಂತೂ ಪ್ರತಿದಿನ ವರದಿಯಾಗುತ್ತಿರುವ ಪ್ರಕರಣಗಳು ಅಮೆರಿಕ, ಬ್ರೆಜಿಲ್ಅನ್ನೂ ಮೀರಿಸುತ್ತಿವೆ. ಅದರ ನಡುವೆ ಇಲ್ಲೊಂದು ದೇಶದಲ್ಲಿ ಮಾಸ್ಕ್ ಧರಿಸೋದು ಕೂಡ ಕಡ್ಡಾಯವೇನಲ್ಲ ಎಂದು ಘೋಷಿಸಲಾಗಿದೆ.
ಹೌದು...! ಜಗತ್ತಿಗೆಲ್ಲ ಕರೊನಾ ಹಂಚಿದ ಚೀನಾ ಈಗ ಭಾರಿ ನಿರಾಳವಾಗಿದೆ. ಚೀನಾದ ಅರೋಗ್ಯ ಅಧಿಕಾರಿಗಳು ಈಗ ಎರಡನೇ ಬಾರಿ ಹಲವು ನಿರ್ಬಂಧಗಳನ್ನು ಸಡಿಲಿಸಿದ್ದಾರೆ. ಎರಡು ಸುತ್ತಿನ ಲಾಕ್ಡೌನ್ ಬಳಿಕ ಡ್ರ್ಯಾಗನ್ ರಾಷ್ಟ್ರ ಸಾಮಾನ್ಯ ಸ್ಥಿತಿಗೆ ತಲುಪಿದೆ.
ಕಳೆದ 13 ದಿನಗಳಿಂದ ಚೀನಾದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಜನರು ಮಾಸ್ಕ್ ಧರಿಸದೇ ಓಡಾಡಬಹುದು ಎಂದು ಪ್ರಕಟಿಸಲಾಗಿದೆ. ಆಧರೆ, ಬಹುತೇಕ ಜನರು ಮಾಸ್ಕ್ ಧರಿಸಿಯೇ ಸಂಚರಿಸುತ್ತಿದ್ದಾರೆ.
ಮಾಸ್ಕ್ ಧರಿಸುವುದು ನನಗೆ ಸುರಕ್ಷತೆಯ ಅನುಭವ ನೀಡುತ್ತದೆ. ನಾನು ಮಾಸ್ಕ್ ಧರಿಸದಿದ್ದರೆ, ಇತರರು ನನ್ನ್ನು ನೋಡುವ ದೃಷ್ಟಿಕೋನವೇ ಬಲಾಗುತ್ತದೆ ಎನ್ನುವುದು ಬೀಜಿಂಗ್ ಯುವತಿಯೊಬ್ಬಳ ಅಭಿಪ್ರಾಯ.
ಆಗಸ್ಟ್ 20ರ ವರೆಗೆ ವಿದೇಶದಿಂದ ಬಂದ ಕೆಲವರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಚೀನಿಯರಲ್ಲದ ಪ್ರಜೆಗಳಿಗೆ ಅಂತಾರಾಷ್ಟ್ರಿಯ ಗಡಿಗಳನ್ನು ಬಂದ್ ಮಾಡಲಾಗಿದೆ. ಕಳೆದ ಏಪ್ರಿಲ್ನಲ್ಲೂ ಚೀನಿಯರಿಗೆ ಮಾಸ್ಕ್ ಧರಿಸುವುದರಿಂದ ವಿನಾಯ್ತಿ ನೀಡಲಾಗಿತ್ತು.
ಕರೊನಾಮುಕ್ತ ದೇಶವೆಂದು ಹೇಳಿಕೊಂಡಿದ್ದ ನ್ಯೂಜಿಲೆಂಡ್ನ ಆಕ್ಲಂಡ್ನಲ್ಲಿ ಕರೊನಾ ಕೇಸ್ಗಳು ಕಾಣಿಸಿಕೊಂಡಿದ್ದರಿಂದ ಮತ್ತೆ ಅಲ್ಲಿ ಎರಡನೇ ಹಂತದ ಲಾಕ್ಡೌನ್ ಘೋಷಿಸಲಾಗಿದೆ.