More

    ಹೊಟೇಲ್​, ರೆಸ್ಟೋರಂಟ್​ಗಳಲ್ಲಿ ಮದ್ಯ ಸರಬರಾಜು; ಯಾವ ರಾಜ್ಯಗಳಲ್ಲಿದೆ ಅವಕಾಶ?

    ನವದೆಹಲಿ: ಕರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿರುವ ಕಾರಣ ಹಂತಹಂತವಾಗಿ ಹಲವು ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ದೆಹಲಿ ಸರ್ಕಾರ, ಇದೀಗ ಹೋಟೆಲ್​ ಹಾಗೂ ರೆಸ್ಟೋರಂಟ್​ಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶ ನೀಡಿದೆ.

    ಜೂನ್​ 8ರಿಂದ ಹೋಟೆಲ್​, ರೆಸ್ಟೋರಂಟ್​ಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವಕಾಶ ನೀಡಿವೆ. ಆದರೆ, ಮದ್ಯ ಸರಬರಾಜಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಸರ್ಕಾರಕ್ಕೆ ಆದಾಯವೂ ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಇದನ್ನೂ ಓದಿ; ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ

    ಈ ಬಗ್ಗೆ ಅಗತ್ಯ ಅನುಮತಿಗಳನ್ನು ನೀಡುವಂತೆ ಅಬಕಾರಿ ಇಲಾಖೆಗೆ ದೆಹಲಿ ಉಪಮುಖ್ಯಮತ್ರಿ ಮನೀಶ್​ ಸಿಸೋಡಿಯಾ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

    ಅಸ್ಸಾಂ, ಪಂಜಾಬ್​, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಪರವಾನಗಿ ಪಡೆದಿರುವ ರೆಸ್ಟೋರಂಟ್​, ಕ್ಲಬ್​, ಹೋಟೆಲ್​ ರೂಮ್​ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡಲಾಗಿದೆ.

    ಇದನ್ನೂ ಓದಿ; ಅನುಕಂಪ ಆಧಾರದ ಸರ್ಕಾರಿ ಕೆಲಸ; ಗಳಿಸಿದ್ದು ಕೆಜಿಗಟ್ಟಲೇ ಚಿನ್ನ, ಬೆಳ್ಳಿ; ಕೋಟ್ಯಂತರ ಮೌಲ್ಯದ ಸ್ವತ್ತು ವಶ 

    ದೆಹಲಿಯಲ್ಲಿ ಹೋಟೆಲ್​ ಹಾಗೂ ವಾರದ ಸಂತೆಗಳನ್ನು ನಡೆಸಲು ಅವಕಾಶ ನೀಡಿದ ಮರುದಿನವೇ ಈ ಆದೇಶ ಹೊರಬಿದ್ದಿದೆ. ಹೋಟೆಲ್​ಗಳನ್ನು ತೆರೆಯಲು ಅವಕಾಶ ನೀಡಿದ ಕ್ರಮಕ್ಕೆ ಕೇಂದ್ರ ಸಚಿವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts