More

    ಶುಭಸುದ್ದಿ…! ಮೋದಿ ಬಯಸಿದಲ್ಲಿ ತುರ್ತು ಬಳಕೆಗೆ ಸಜ್ಜಾಗುತ್ತೆ ದೇಶಿಯ ಕರೊನಾ ಲಸಿಕೆ

    ನವದೆಹಲಿ: ದೇಶಿಯ ಕರೊನಾ ಲಸಿಕೆ ಸಂಶೋಧನೆಯನ್ನು ಸಾಧ್ಯವಾದಷ್ಟು ತ್ವರಿತಗೊಳಿಸಲು ಕೇಂದ್ರ ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಎರಡು ಲಸಿಕೆಗಳು ಮಾನವರ ಮೇಲೆ ಎರಡನೇ ಹಂತದ ಪರೀಕ್ಷೆಯನ್ನು ಬಹುತೇಕ ಪೂರ್ಣಗೊಳಿಸಿವೆ. ಪ್ರಸ್ತುತ ಇದರ ತುರ್ತು ಬಳಕೆ ಬಗ್ಗೆ ಚರ್ಚೆ ನಡೆಯುತ್ತಿದೆ.

    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್​) ಹಿರಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಗೆ ನೀಡಿರುವ ಮಾಹಿತಿ ಪ್ರಕಾರ, ಭಾರತ್​ ಬಯೋಟೆಕ್​ನ ಕೊವಾಕ್ಸಿನ್​ ಹಾಗೂ ಝೈಡಸ್​ ಕ್ಯಾಡಿಲ್ಲಾದ ಝೈಕೊವ್​ ಡಿ ಲಸಿಕೆಗಳ ಮಾನವರ ಮೇಲಿನ ಪ್ರಯೋಗದ ಎರಡನೇ ಹಂತದ ಪರೀಕ್ಷೆಗಳು ಪೂರ್ಣಗೊಂಡಿವೆ. ಒಂದು ವೇಳೆ ಕೇಂದ್ರ ಸರ್ಕಾರ ಬಯಸಿದಲ್ಲಿ ಈ ಲಸಿಕೆಗಳ ತುರ್ತು ಬಳಕೆಯನ್ನು (ಎಮರ್ಜೆನ್ಸಿ ಅಥರೈಜೇಷನ್​ ) ಪರಿಗಣಿಸಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ; ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ 

    ಕೊವಾಕ್ಸಿನ್​, ಜೈಕೊವ್​ ಡಿ ಹಾಗೂ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಲಸಿಕೆಗಳು ವಿವಿಧ ಹಂತದ ಪರೀಕ್ಷೆಗಳಲ್ಲಿವೆ ಎಂದು ಐಸಿಎಂಆರ್​ನ ಮಹಾನಿರ್ದೇಶಕ ಬಲರಾಮ್​ ಭಾರ್ಗವ್​ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

    ಈ ಲಸಿಕೆಗಳು ಯಾವಾಗ ಸಿದ್ಧವಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಭಾರ್ಗವ್​, ಸಾಮಾನ್ಯವಾಗಿ ಅಂತಿಮ ಹಂತದ ಪರೀಕ್ಷೆಗಳು 6-9 ತಿಂಗಳವರೆಗೆ ನಡೆಯುತ್ತವೆ. ಒಂದು ಸರ್ಕಾರ ಪರಿಗಣಿಸುವುದಾದರೆ, ತುರ್ತು ಅಗತ್ಯಗಳಿಗೆ ಇವುಗಳನ್ನು ಪ್ರಯೋಗಿಸಬಹುದು ಎಂದು ಹೇಳಿದ್ದಾಗಿ ಸಂಸದರೊಬ್ಬರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಎಂಟು ವರ್ಷಗಳಿಂದ ಕರೊನಾವನ್ನು ಪೋಷಿಸುತ್ತಿತ್ತಾ ಚೀನಾ…? 

    ನಮ್ಮ ತಜ್ಞರು ಋಷಿ-ಮುನಿಗಳಂತೆ ಪರಿಶ್ರಮದಿಂದ ಲಸಿಕೆ ಸಂಶೋದನೆಯಲ್ಲಿ ತೊಡಗಿದ್ದಾರೆ. ಒಂದೊಮ್ಮೆ ಅವರು ಹಸಿರು ನಿಶಾನೆ ತೋರಿಸಿದ್ದೇ ಆದಲ್ಲಿ ಕರೊನಾ ಲಸಿಕೆ ಉತ್ಪಾದನೆಗೆ, ಅದರ ವಿತರಣೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸ್ವತಃ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು.

    ಭಾರತದಲ್ಲಿ ಕರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದಲ್ಲಿ ಸರ್ಕಾರ ಇಂಥದ್ದೊಂದು ಕ್ರಮಕ್ಕೂ ಮುಂದಾದರೆ ಅಚ್ಚರಿಯಿಲ್ಲ. ಏಕೆಂದರೆ, ರಷ್ಯಾ, ಚೀನಾ ರಾಷ್ಟ್ರಗಳು ತಾವು ಸಂಶೋಧಿಸಿರುವ ಲಸಿಕೆಯನ್ನು ನೋಂದಾಯಿಸಿಕೊಂಡು ತುರ್ತು ಬಳಕೆಗೆ ಅವಕಾಶ ಮಾಡಿಕೊಂಡಿವೆ.

    ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts