More

    ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ

    ನವದೆಹಲಿ: ದೇಶದಲ್ಲಿನ ವಿವಿಧ ಉದ್ಯೋಗಗಳಿಗೆ ಒಂದೇ ಸಾಮಾನ್ಯ ಅರ್ಹತಾ ಪರೀಕ್ಷೆ ಹಾಗೂ ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದರಿಂದ ಭಾರಿ ಅನುಕೂಲವಾಗಲಿದೆ.

    ಇಂಥದ್ದೊಂದು ಪ್ರಸ್ತಾವನೆ ಈ ಹಿಂದಿನಿಂತಲೂ ಇತ್ತು. ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರದ ರಚನೆ ಮತ್ತೊಂದು ಹಂತಕ್ಕೆ ತಲುಪಿದೆ ಎಂದು ಕಳೆದ ಜೂನ್​ನಲ್ಲಿಯೇ ಕೇಂದ್ರ ಸಚಿವ ಜೀತೇಂದ್ರ ಸಿಂಗ್​ ಮಾಹಿತಿ ನೀಡಿದ್ದರು.

    ರಾಷ್ಟ್ರೀಯ ನೇಮಕಾತಿ ಪ್ರಾಧಿಕಾರ ಸ್ವಾಯತ್ತ ಸಂಸ್ಥೆಯಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಸೇರಿ ಉದ್ಯೋಗಾಕಾಂಕ್ಷಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಮುಖ್ಯವಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ವಿಳಂಬ, ಅಕ್ರಮ ಹಾಗೂ ಮಹಿಳಾ ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಿರುವುದು ಸೇರಿ ಹಲವು ಅಡಚಣೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ.

    ಇದನ್ನೂ ಓದಿ; ಅಮೆರಿಕಕ್ಕಿಂತಲೂ ದುಬಾರಿ ಚೀನಿ ಕರೊನಾ ಲಸಿಕೆ; ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ

    ಇದಲ್ಲದೇ, ಹಲವು ಬಾರಿ ಪರೀಕ್ಷೆಗಳಿಗೆ ಶುಲ್ಕ ಪಾವತಿಸುವುದು, ಹಲವು ವಿಧದ ಸಂಸ್ಕರಣಾ ಶುಲ್ಕಗಳು ಮೊದಲಾದ ಸಂಗತಿಗಳನ್ನು ಸರಳಗೊಳಿಸಲಾಗುತ್ತಿದೆ. ಒಂದೇ ಸಮಯದಲ್ಲಿ ಹಲವು ಪರೀಕ್ಷೆಗಳು ನಡೆಯುವಂತಾದಾಗ ಆಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಾರೆ. ಅಲ್ಲದೇ, ಪ್ರತಿ ಪರೀಕ್ಷೆಗೂ ಭಿನ್ನ ಪಠ್ಯಕ್ರಮವಿರುವುದರಿಂದ ಪ್ರತ್ಯೇಕವಾಗಿ ತಯಾರಾಗಬೇಕಾಗುತ್ತದೆ. ಈ ಕಾರ್ಯಗಳಿಂದಾಗಿ ನೇಮಕಾತಿ ಪ್ರಕ್ರಿಯೆ ತುಂಬ ವಿಳಂಬವಾಗುತ್ತಿದೆ. ನೇಮಕಾತಿ ಪ್ರಾಧಿಕಾರ ಈ ಪುನರಾವರ್ತನೆಗಳನ್ನು ಕಡಿಮೆ ಮಾಡಿ ಕೇಂದ್ರಿಕೃತ ವ್ಯವಸ್ಥೆಯನ್ನು ಜಾರಿ ಮಾಡಲಿದೆ. ಪರೀಕ್ಷೆಗಳಿಗೂ ಏಕರೂಪದ ಮಾನಕ ರೂಪಿಸಲಿದೆ.

    ಸಾಮಾನ್ಯ ಪ್ರವೇಶ ಪರೀಕ್ಷೆ: ಎಲ್ಲ ಗ್ರೂಪ್​ ಬಿ ಹಾಗೂ ಸಿ ವೃಂದದ ನಾನ್​- ಗೆಜೆಟೆಡ್​ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರಲಿದೆ. ಈ ಪರೀಕ್ಷೆಗಳಲ್ಲಿ ಪಾಸಾದರಷ್ಟೇ ಮುಂದಿನ ಹಂತದ ನೇಮಕಾತಿಗೆ ಅಭ್ಯರ್ಥಿಗಳು ಅರ್ಹರಾಗಲಿದ್ದಾರೆ.

    ಇದನ್ನೂ ಓದಿ; ಆರು ತಿಂಗಳಲ್ಲಿ ನಾಲ್ಕು ಕೊಲೆಗೈದ ಶಾರ್ಪ್​ಶೂಟರ್​; ಈತನ ಪ್ಲಾನ್​ ಯಶಸ್ವಿಯಾಗಿದ್ದರೆ ಇರುತ್ತಿರಲಿಲ್ಲ ಸಲ್ಮಾನ್​ ಖಾನ್​…!

    ವಿವಿಧ ಸರ್ಕಾರಿ ಸಂಸ್ಥೆಗಳು, ನೇಮಕಾತಿ ಪ್ರಾಧಿಕಾರಗಳು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುವ ಬದಲು, ಒಂದೇ ಸಾಮಾನ್ಯ ಅರ್ಹತಾ ಅಥವಾ ಪ್ರವೇಶ ಪರೀಕ್ಷೆ ಇರಲಿದೆ. ಇದರ ಫಲಿತಾಂಶ ಮೂರು ವರ್ಷಗಳವರೆಗೆ ಮಾನ್ಯತಾ ಅವಧಿ ಹೊಂದಿರುತ್ತದೆ. ಎಷ್ಟು ಬಾರಿಯಾದರೂ ಈ ಪರೀಕ್ಷೆ ಎದುರಿಸಬಹುದು. ಜತೆಗೆ, ಎಲ್ಲ ಆಕಾಂಕ್ಷಿಗಳಿಗೆ ಒಂದೇ ನೋಂದಣಿ ಪೋರ್ಟಲ್​ ಇರಲಿದೆ. ಇದು ಸಮಯವನ್ನಷ್ಟೇ ಅಲ್ಲದೇ, ಹಣವನ್ನು ಉಳಿಸಲಿದೆ.

    ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts