

ನವದೆಹಲಿ: ಕರೊನಾ ವೈರಸ್ನಿಂದ ಪಾರಾಗುವುದು ಹೇಗೆ ಇಡೀ ಜಗತ್ತು ಚಿಂತಾಕ್ರಾಂತವಾಗಿದೆ. ಈ ನಡುವೆಯೇ ಸ್ಫೋಟಕ ಸುದ್ದಿಯೊಂದು ಹೊರ ಬಿದ್ದಿದೆ.
ಥಾಯ್ಲೆಂಡ್ನಲ್ಲಿ ಸದ್ಯ ವಿವಿಧ ಜಾತಿಗಳ ಬಾವಲಿಗಳ ಮೇಲೆ ಸಂಶೋಧನೆ ನಡೆಸಲಾಗುತ್ತಿದೆ. ಅಂದರೆ ಈ ವೈರಸ್ ಹರಡಿದ್ದು, ಬಾವಲಿಗಳಿಂದಲೇ ಎಂಬುದನ್ನು ತಿಳಿಯಲಾಗುತ್ತಿದೆ. ಇದಕ್ಕಾಗಿ ಗುಹೆಗಳಲ್ಲಿರುವ ಬಾವಲಿಗಳನ್ನು ಹಿಡಿದು, ಅದರ ಮಲದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಫಲಿತಾಂಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಆದರೆ, ಅದಕ್ಕೂ ಮುನ್ನ ಚೀನಾದಿಂದಲೇ ಮತ್ತೊಂದು ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ. ನ್ಯೂಯಾರ್ಕ್ನ ಬಯೋಸೈನ್ಸ್ ಯೋಜನೆಯ ತಜ್ಞರು ಈ ಸತ್ಯವನ್ನು ಬಯಲಿಗೆಳೆದಿದ್ದಾರೆ. ಅದೇನೆಂದರೆ, ಚೀನಾದಲ್ಲಿ ಎಂಟು ವರ್ಷಗಳ ಹಿಂದೆಯೇ ಕರೊನಾ ವೈರಸ್ ಪತ್ತೆಯಾಗಿತ್ತು....!
ವುಹಾನ್ನಿಂದ ಒಂದು ಸಾವಿರ ಕಿ.ಮೀ. ದೂರ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದಲ್ಲಿ ಈ ವೈರಸ್ ಪತ್ತೆಯಾಗಿತ್ತು ಎನ್ನಲಾಗಿದೆ. ಇಲ್ಲಿನ ಗಣಿಗಳಲ್ಲಿ ಬಾವಲಿಗಳ ಮಲ ಸ್ವಚ್ಛಗೊಳಿಸುತ್ತಿದ್ದ ಆರು ಕಾರ್ಮಿಕರಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು. ಮೂವರು ಅಲ್ಲಿಯೇ ಮೃತಪಟ್ಟಿದ್ದರು. ಈಗ ಕರೊನಾ ಸೋಂಕಿತರಲ್ಲಿ ಕಂಡುಬರುತ್ತಿರುವ ಲಕ್ಷಣಗಳೇ ಅವರೆಲ್ಲರೂ ಕಂಡುಬಂದಿದ್ದವು.
ಈ ಕಾರ್ಮಿಕರ ರಕ್ತ, ಗಂಟಲು ದ್ರವದ ಮಾದರಿಯನ್ನು ವುಹಾನ್ ವೈರಾಣುಶಾಸ್ತ್ರ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ವಿಶ್ವಕ್ಕೆ ಈ ವೈರಸ್ ಹರಡಿದ್ದು ಚೀನಾದ ವುಹಾನ್ನಿಂದ ಎಂಬುದನ್ನು ಸ್ವತ: ಆ ದೇಶವೇ ಒಪ್ಪಿಕೊಂಡಿದೆ....!
ಅಂದರೆ, ಕಳೆದ ಎಂಟು ವರ್ಷಗಳಿಂದ ಚೀನಾ ಕರೊನಾ ವೈರಸ್ಗಳನ್ನು ಪೋಷಣೆ ಮಾಡುತ್ತಿತ್ತೆ? ಈ ವೈರಸ್ ಆಕಸ್ಮಿಕವಾಗಿ ಲ್ಯಾಬ್ನಿಂದ ಸೋರಿಕೆಯಾಗಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ಚೀನಾ ಈ ವೈರಸ್ ಬಿಡುಗಡೆ ಮಾಡಿದಿಯೇ? ಎಂಬ ಪ್ರಶ್ನೆಯೀಗ ಇಡೀ ಜಗತ್ತನ್ನು ಕಾಡುತ್ತಿವೆ.