ವಿಡಿಯೋ: ಗಾಯಾಳು ಹಸುವಿಗೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ ರೈತ...!

Cow
Published on

ರೈತರಿಗೆ ಅಥವಾ ಹೈನುಗಾರರಿಗೆ ಜಾನುವಾರಗಳು ಜೀವಾಳವಾಗಿರುತ್ತವೆ. ತಮಗಾಗಿ ಬದುಕನ್ನೇ ಸವೆಸುವ ಅಂಥ ಪ್ರಾಣಿಗಳ ಬಗ್ಗೆ ಎಲ್ಲಿಲ್ಲದ ಕಾಳಜಿಯನ್ನು ಹಲವರು ಹೊಂದಿರುತ್ತಾರೆ. ಇದಕ್ಕೊಂದು ಅತ್ಯುತ್ಕೃಷ್ಠ ನಿದರ್ಶನ ಇಲ್ಲಿದೆ.

ಸ್ವಿಜರ್ಲೆಂಡ್​ನಲ್ಲಿನ ರೈತನೊಬ್ಬ ತನ್ನ ಹಸುವಿನ ಮೇಲೆ ತೋರಿದ ಪ್ರೀತಿ ಮತ್ತು ಕಾಳಜಿ ಭಾರಿ ಪ್ರಶಸಂಶೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತೆ?

ಗಾಯದಿಂದ ನರಳುತ್ತಿದ್ದ ಹಸುವನ್ನು ಚಿಕಿತ್ಸೆಗೆಂದು ಕೊಂಡೊಯ್ಯಲು ಹೆಲಿಕಾಪ್ಟರ್​ಅನ್ನೇ ಬಳಸಿದ್ದಾನೆ. ಅಲ್ಪ್ಸ್​ ಪರ್ವತ ಪ್ರದೇಶದಲ್ಲಿದ್ದ ಹಸುವನ್ನು ಏರ್​ಲಿಫ್ಟ್​ ಮಾಡಿ ಸುರಕ್ಷಿತ ಪ್ರದೇಶದಲ್ಲಿ ಇಳಿಸಿದೆ.

ತನಗೆ ಆಗಿರುವ ಗಾಯದಿಂದ ಮತ್ತಷ್ಟು ಹಸು ನರಳದಿರಲಿ ಅಥವಾ ನೋವು ಅನುಭವಿಸದಿರಲು ರೈತ ಈ ಕ್ರಮಕೈಗೊಂಡಿದ್ದಾನೆ. ಈ ವಿಡಿಯೋವನ್ನು ಆನ್​ಲೈನ್ನಲ್ಲಿ ಶೇರ್​ ಮಾಡಲಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net