More

    ಹಾಲು, ಔಷಧ, ಫರ್ನಿಚರ್​ ಮಾರಾಟಕ್ಕೆ ಮುಂದಾದ ರಿಲಯನ್ಸ್​; ನೆಟ್​ಮೆಡ್ಸ್​ನಲ್ಲಿ 620 ಕೋಟಿ ರೂ. ಹೂಡಿದ ಅಂಬಾನಿ

    ಮುಂಬೈ: ತೈಲೋತ್ಪನ್ನ, ಟೆಲಿಕಾಂ ಕ್ಷೇತ್ರದಲ್ಲಿ ಜಾಗತಿಕ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಈಗ ರಿಟೇಲ್​ ಕ್ಷೇತ್ರದಲ್ಲೂ ಭಾರಿ ವಿಸ್ತರಣೆಗೆ ಮುಂದಾಗಿದೆ.

    ಡಿಜಿಟಲ್​ ವಹಿವಾಟು ವಿಸ್ತರಿಸಿಕೊಳ್ಳುತ್ತಿರುವ ಕಂಪನಿ, ಆನ್​ಲೈನ್​ ಔಷಧ ಮಾರಾಟ ಕ್ಷೇತ್ರದಲ್ಲಿ ಭಾರಿ ಬಂಡವಾಳ ತೊಡಗಿಸಿದೆ. ನೆಟ್​ಮೆಡ್ಸ್​ ಕಂಪನಿಯಲ್ಲಿ ಶೇ.60 ಶೇರುಗಳನ್ನು ತನ್ನದಾಗಿಸಿಕೊಂಡಿದೆ. ಇದಕ್ಕಾಗಿ 620 ಕೋಟಿ ರೂ.ಗಳನ್ನು ತೊಡಗಿಸಿರುವುದಾಗಿ ಮಾಹಿತಿ ನೀಡಿದೆ.

    ಚೆನ್ನೈ ಮೂಲದ ವಿಟಾಲಿಕ್​ ಸಂಸ್ಥೆಯಲ್ಲಿ ಶೇ. 60 ಶೇರುಗಳಿ ರಿಲಯನ್ಸ್​ದಾದರೆ, ಟ್ರೆಸರಾ ಹೆಲ್ತ್​ ಪ್ರೈವೇಟ್​ ಲಿಮಿಟೆಡ್​, ನೆಟ್​​ಮೆಡ್ಸ್ ಮಾರ್ಕೆಟ್​ ಪ್ಲೇಸ್​ ಲಿಮಿಟೆಡ್​ ದದ್ದಾ ಫಾರ್ಮಾ ಡಿಸ್ಟ್ರಿಬ್ಯೂಷನ್​ ಕಂಪನಿ ಪೂರ್ಣ ಪ್ರಮಾಣದಲ್ಲಿ ರಿಲಯನ್ಸ್​ ತೆಕ್ಕೆಗೆ ಬಂದಂತಾಗಿವೆ.

    ಇದನ್ನೂ ಓದಿ; ಆರು ತಿಂಗಳಲ್ಲಿ ನಾಲ್ಕು ಕೊಲೆಗೈದ ಶಾರ್ಪ್​ಶೂಟರ್​; ಈತನ ಪ್ಲಾನ್​ ಯಶಸ್ವಿಯಾಗಿದ್ದರೆ ಇರುತ್ತಿರಲಿಲ್ಲ ಸಲ್ಮಾನ್​ ಖಾನ್​…! 

    ಇನ್ನೊಂದೆಡೆ, ಫರ್ನಿಚರ್​ ಮಾರಾಟ ಸಂಸ್ಥೆ ಅರ್ಬನ್​ ಲ್ಯಾಡರ್​ ಹಾಗೂ ಹಾಲು ಮಾರಾಟ ಸಂಸ್ಥೆ ಮಿಲ್ಕ್​ ಬಾಸ್ಕೆಟ್​ ಖರೀದಿಗೂ ರಿಲಯನ್ಸ್​ ಮುಂದಾಗಿದೆ.
    ಅರ್ಬನ್ ಲ್ಯಾಡರ್​ ಸಂಸ್ಥೆಯನ್ನು ಅಂದಾಜು 225 ಕೋಟಿ ರೂ.ಗಳಿಗೆ ಖರೀದಿಸುವ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಜತೆಗೆ, ಮಿಲ್ಕ್​ ಬಾಸ್ಕೆಟ್​ ಕಂಪನಿ ಜತೆಗೂ ಚರ್ಚೆ ನಡೆಸಿದೆ.

    ಇದಕ್ಕೂ ಮುನ್ನ್ ಅಲಿಬಾಬಾ ಹೂಡಿಕೆಯ ಬಿಗ್​ ಬಾಸ್ಕೆಟ್​ ಜತೆಗೂ ಮಿಲ್ಕ್​ ಬಾಸ್ಕೆಟ್​ ಮಾರಾಟ ಮಾತುಕತೆ ನಡೆಸಿತ್ತು. ಆದರೆ, ನಿರೀಕ್ಷಿತ ಮೊತ್ತ ಹೊಂದಾಣಿಕೆಯಾಗದೇ ವ್ಯಾಪಾರ ಕುದುರಿರಲಿಲ್ಲ. ಆನ್​ಲೈನ್​ ದಿನಸಿ ಮಾರಾಟ ಸಂಸ್ಥೆ ಜಿಯೋ ಮಾರ್ಟ್​ ವಹಿವಾಟನ್ನು ಇನ್ನಷ್ಟು ಸುದೃಢಗೊಳಿಸುವ ಹೆಚ್ಚು ಗ್ರಾಹಕರನ್ನು ತಲುಪುವ ಉದ್ದೇಶ ಇದರದ್ದಾಗಿದೆ.

    ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts