More

    ದೆಹಲಿಯ ಏಳು ಆಸ್ಪತ್ರೆ, ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ!

    ನವದೆಹಲಿ: ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆಗಳು, ವಿಮಾನ ನಿಲ್ದಾಣ ಮತ್ತು ಉತ್ತರ ರೈಲ್ವೆಯ ಸಿಪಿಆರ್‌ಒ ಕಚೇರಿಗೆ ಬೆದರಿಕೆ ಇ-ಮೇಲ್​ ಬಂದ ಎರಡು ದಿನಗಳ ಬಳಿಕ ಏಳು ಆಸ್ಪತ್ರೆಗಳು ಮತ್ತು ತಿಹಾರ್ ಜೈಲಿಗೆ ಅದೇ ಮಾದರಿಯ ಬಾಂಬ್ ಬೆದರಿಕೆಯ ಸಂದೇಶ ಮಂಗಳವಾರ ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿಯ ಲವ್ವಿ-ಡವ್ವಿ; ಫೋಟೋ ವೈರಲ್, ದೂರು ದಾಖಲು

    ಪೊಲೀಸರ ಪ್ರಕಾರ, “[email protected]” ಐಡಿಯಿಂದ ಸಂದೇಶ ಕಳುಹಿಸಲಾಗಿದೆ. ಇದು ಯೂರೋಪ್ ಮೂಲದ ಮೇಲಿಂಗ್ ಸೇವಾ ಕಂಪನಿಯಾಗಿದೆ. ಸೇವಾ ಕಂಪನಿಯಾದ ‘beeble.com’ ನಿಂದ ಕಳುಹಿಸಲಾಗಿದೆ, ಅದೇ ವಿಷಯವನ್ನು ಭಾನುವಾರ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.

    “ನಿಮ್ಮ ಕಟ್ಟಡದಲ್ಲಿ ಸ್ಫೋಟಕ ಇರುವ ಸಾಧನವನ್ನು ಅಳವಡಿಸಲಾಗಿದೆ. ಮುಂದಿನ ಕೆಲ ಗಂಟೆಯಲ್ಲಿ ಅದು ಸ್ಫೋಟಗೊಳ್ಳಲಿದೆ. ಇದು ಬೆದರಿಕೆಯಲ್ಲ, ಇನ್ನೂ ಕೆಲವೇ ಗಂಟೆಗಳಲ್ಲಿ ಬಾಂಬ್​ ಸ್ಫೋಟಸಲಿದೆ. ನಿಮಗೆ ಕೆಲವು ಗಂಟೆಗಳ ಕಾಲಾವಕಾಶವಿದೆ ಮುಗ್ಧ ಜನರ ಪ್ರಾಣ ನಿಮ್ಮ ಕೈಯಲ್ಲಿದೆ ಎಂದು ಹೇಳಲಾಗಿದೆ.
    ತಿಹಾರ್ ಜೈಲಿಗೆ ಗುರುತು ಮಾಡಿದ ಇ-ಮೇಲ್ ಅನ್ನು ಒಂದು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

    ಉತ್ತರ ದೆಹಲಿಯ ಅಶೋಕ್ ವಿಹಾರ್‌ನಲ್ಲಿರುವ ದೀಪ್ ಚಂದ್ ಬಂಧು ಆಸ್ಪತ್ರೆ, ದಾಬ್ರಿಯಲ್ಲಿರುವ ದಾದಾ ದೇವ್ ಆಸ್ಪತ್ರೆ, ಫಾರ್ಶ್ ಬಜಾರ್‌ನಲ್ಲಿರುವ ಹೆಡ್ಗೆವಾರ್ ಆಸ್ಪತ್ರೆ, ಶಾಹದಾರದಲ್ಲಿರುವ ಜಿಟಿಬಿ ಆಸ್ಪತ್ರೆ, ಕೇಶವಪುರಂನ ಅತ್ತರ್ ಸೈನ್ ಜೈನ್ ಆಸ್ಪತ್ರೆ, ಚಾಚಾ ನೆಹರು ಆಸ್ಪತ್ರೆ ಮತ್ತು ಹರಿನಗರದಲ್ಲಿರುವ ಡಿಡಿಯು ಆಸ್ಪತ್ರೆಗಳಿಗೂ ಇದೇ ಮೇಲ್ ಬಂದಿದೆ. ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್​ ಇ-ಮೇಲ್​ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

    ನಂತರ ತಿಹಾರ್ ಜೈಲಿನಲ್ಲೂ ಶೋಧಾ ಕಾರ್ಯ ನಡೆಯಿತು. ಆದರೆ ಅಲ್ಲಿಯೂ ಏನು ಪತ್ತೆಯಾಗಿಲ್ಲ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    “ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ತಪಾಸಣೆ ನಡೆಸಿದ್ದಾರೆ. ನಾವು ಸಹ ಎರಡು ಬಾರಿ ತಪಾಸಣೆ ನಡೆಸಿದ್ದೇವೆ. ಇದುವರೆಗೆ ಯಾವುದೇ ಅನುಮಾನಾಸ್ಪದವಾಗಿ ಕಂಡುಬಂದಿಲ್ಲ” ಎಂದು ಹೆಡಗೇವಾರ್ ಆಸ್ಪತ್ರೆಯ ಭದ್ರತಾ ಅಧಿಕಾರಿ ವಿಕೆ ಶರ್ಮಾ ತಿಳಿಸಿದ್ದಾರೆ. ದೆಹಲಿಯಲ್ಲಿ ಶಾಲೆಗಳು ಸೇರಿದಂತೆ ವಿವಿಧೆಡೆ ಇಂತಹ ಬೆದರಿಕೆಗಳು ಬಂದಿರುವುದು ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ.

    ಪ್ರಧಾನಿ ಮೋದಿ ಬಳಿ ಇರೋದು 52 ಸಾವಿರ ರೂಪಾಯಿ ನಗದು, ಬಿಡಿಗಾಸಿನ ಸ್ಥಿರಾಸ್ತಿಯೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts