More

    ಪ್ರಧಾನಿ ಮೋದಿ ಬಳಿ ಇರೋದು 52 ಸಾವಿರ ರೂಪಾಯಿ ನಗದು, ಬಿಡಿಗಾಸಿನ ಸ್ಥಿರಾಸ್ತಿಯೂ ಇಲ್ಲ!

    ನವದೆಹಲಿ: ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿ ಅವರು ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. 2014 ರಲ್ಲಿ ಅವರು ಭಾರತದ ಪ್ರಧಾನ ಮಂತ್ರಿ ಹುದ್ದೆಯನ್ನು ವಹಿಸಿಕೊಂಡರು. ಇಂದು ಅವರ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದೆ.

    ಇದನ್ನೂ ಓದಿ: ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿಯ ಲವ್ವಿ-ಡವ್ವಿ; ಫೋಟೋ ವೈರಲ್, ದೂರು ದಾಖಲು

    ಹಣದ ವ್ಯಾಮೋಹವೇ ಇಲ್ಲದ ರಾಜಕಾರಣಿ ಎನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇರುವ ಒಟ್ಟು ಸಂಪತ್ತು ಎಷ್ಟು? ಇದು ಅನೇಕರಲ್ಲಿ ಇರುವ ಪ್ರಶ್ನೆ. ಇಂದು ಅವರು ಉತ್ತರ ಪ್ರದೇಶದ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಅವರ ಒಟ್ಟು 3.02 ಕೋಟಿ ಮೌಲ್ಯದ ಚರಾಸ್ತಿಯನ್ನು ಘೋಷಣೆ ಮಾಡಿದ್ದಾರೆ.

    ಪ್ರಧಾನಿ ಮೋದಿ ಅವರು 52,920 ರೂಪಾಯಿ ನಗದು ಹೊಂದಿದ್ದಾರೆ. ಕಾರು, ಬಂಗಲೆಯಂತಹ ಯಾವುದೇ ಸ್ಥಿರಾಸ್ತಿ ಅವರ ಬಳಿ ಇಲ್ಲ. ಗುಜರಾತಿನಲ್ಲಿ ಇದ್ದ ತಮ್ಮ ಪಾಲಿನ ನಿವೇಶನ ಹಕ್ಕನ್ನು ಮೋದಿ ದಾನ ಮಾಡಿದ್ದಾರೆ. ಷೇರು, ಬಾಂಡ್‌, ಮ್ಯುಚುವಲ್‌ ಫಂಡ್‌ ಹೂಡಿಕೆ ಮಾಡಿಲ್ಲ. ಯಾವುದೇ ಸ್ವಂತ ವಾಹನ ಇಲ್ಲ. 2018-19 ರ ಆರ್ಥಿಕ ವರ್ಷದಲ್ಲಿ 11,14,230 ರೂ. ಆದಾಯವಿದ್ದರೆ 2022-23 ರಲ್ಲಿ ಇದು 23,56,080 ರೂ.ಗೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ನಾಲ್ಕು ಚಿನ್ನದ ಉಂಗುರಗಳಿವೆ: ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಗಾಂಧಿನಗರ ಎಸ್‌ಬಿಐನ ಶಾಖೆಯಲ್ಲಿ 52,920 ರೂ.ಗಳನ್ನು ಠೇವಣಿ ಇರಿಸಿದ್ದರೆ, ವಾರಣಾಸಿ ಎಸ್‌ಬಿಐನ ಶಾಖೆಯಲ್ಲಿ ಕೇವಲ 7,000 ರೂ ಠೇವಣಿ ಇರಿಸಿದ್ದಾರೆ. ಎಸ್‌ಬಿಐನಲ್ಲಿ 2,85,60,338 ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ನಲ್ಲಿ 9,12,398 ರೂ. ಇದೆ ಎಂದು ಘೋಷಿಸಿದ್ದಾರೆ.

    ಸತತ ಮೂರನೇ ಬಾರಿಗೆ ನಾಮಪತ್ರ ಸಲ್ಲಿಕೆ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಜೂನ್‌ 1ಕ್ಕೆ ಕೊನೆ ಹಂತದಲ್ಲಿ ವಾರಣಾಸಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ 11.40ಕ್ಕೆ ಅಭಿಜಿತ್‌ ಲಗ್ನ ಮುಹೂರ್ತದಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

    ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಅಯೋಧ್ಯೆಯ ಪ್ರಾಣ ಪ್ರತಿಷ್ಠಾನಕ್ಕೆ ಮುಹೂರ್ತ ನಿಗದಿಪಡಿಸಿದ್ದ ಪಂಡಿತ್‌ ಗಣೇಶ್ವರ ಶಾಸ್ತ್ರಿ ಅವರು ಹಾಜರಿದ್ದರು. ಪ್ರಧಾನಿ ಪಕ್ಕದಲ್ಲಿಯೇ ಕುಳಿತಿದ್ದ ಗಣೇಶ್ವರ್‌ ಶಾಸ್ತ್ರಿ ಅವರು ಮೋದಿ ಉಮೇದುವಾರಿಕೆಯ ಪ್ರಮುಖ ಸೂಚಕರಾಗಿದ್ದರು. ಅದಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಈ ವೇಳೆ ಹಾಜರಿದ್ದರು.
    ವಾರಣಾಸಿ ಕ್ಷೇತ್ರಕ್ಕೆ ಜೂನ್ 1 ರಂದು ಏಳನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

    ಖಲಿಸ್ತಾನ ಪರ ಗೋಡೆ ಬರಹ: ನಿಷೇಧಿತ ಸಿಖ್​ ಫಾರ್ ಜಸ್ಟೀಸ್ ಸಂಘಟನೆಯ ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts