More

    ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿಯ ಲವ್ವಿ-ಡವ್ವಿ; ಫೋಟೋ ವೈರಲ್, ದೂರು ದಾಖಲು

    ಕೋಲಾರ: ಇಡೀ ರಾಜ್ಯಾದ್ಯಂತ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲಿಯೇ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯತಿ ಸಿಬ್ಬಂದಿಯ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಇದನ್ನೂ ಓದಿ: ಖಲಿಸ್ತಾನ ಪರ ಗೋಡೆ ಬರಹ: ನಿಷೇಧಿತ ಸಿಖ್​ ಫಾರ್ ಜಸ್ಟೀಸ್ ಸಂಘಟನೆಯ ಮೂವರ ಬಂಧನ

    ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ರಾಮಸಾಗರ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಮಹಿಳಾ ಉದ್ಯೋಗಿ ಜೊತೆಗಿರುವ ಖಾಸಗಿ ಫೋಟೋಗಳು ವೈರಲ್ ಆಗಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದಾರೆ ಎನ್ನಲಾಗಿದೆ.

    ಇನ್ನು ಫೋಟೋಗಳು ಸಾಮಾಜಿಕ ಜಾಲ ತಾಣಗಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಮಹಿಳಾ ಸಿಬ್ಬಂದಿ ನನ್ನ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಮತ್ತೊಂದೆಡೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣಗೆ ಎಚ್ಚರಿಕೆ ನೀಡಿದ್ದಾರೆ.

    ಮಹಿಳೆಯಿಂದ ಬಿಲ್ ಕಲೆಕ್ಟರ್ ವಿರುದ್ಧ ದೂರು: ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಬಳಿ ಹೋಗಿ ಕಾಮಚೇಷ್ಟೆ ಮಾಡಿದ್ದಾರಂತೆ. ಅದನ್ನು ವಿರೋಧ ಮಾಡಿದ್ದಕ್ಕೆ ನಿನ್ನ ಗಂಡನಿಗೆ ಗ್ರಾಮ ಪಂಚಾಯಿತಿಯಲ್ಲಿ ಜಲಗಾರ ಕೆಲಸ ಕೊಡಿಸುತ್ತೇನೆ. ಜೊತೆಗೆ, ನಿಮಗೆ ವಾಸಕ್ಕೆಂದು ಪಂಚಾಯಿತಿಯಿಂದ ಉಚಿತ ಸರ್ಕಾರಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ.

    ನಂತರ ತನ್ನೊಂದಿಗೆ ನೀವು ಲೈಂಗಿಕವಾಗಿ ಸಹಕರಿಸಬೇಕು ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ನಿಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತೇನೆ. ಜೊತೆಗೆ, ನೀನು ಮುತ್ತು ಕೊಡುವುದು ಹಾಗೂ ನನ್ನೊಂದಿಗೆ ಖಾಸಗಿಯಾಗಿ ಕಳೆದ ಕ್ಷಣಗಳ ಫೋಟೋ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಆತನ ಕಿರುಕುಳದಿಂದ ನನ್ನ ಸಂಸಾರ ಹಾಗೂ ಜೀವನಕ್ಕೆ ಮುಳುವಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ಬೇತಮಂಗಲ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    5 ರೂ. ಕುರ್ಕುರೆ ಪ್ಯಾಕೆಟ್ ತರದ ಗಂಡನಿಗೆ ಡಿವೋರ್ಸ್​​​ ಕೊಟ್ಟ ಪತ್ನಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts