More

    ಮೊದಲ ಬಾರಿ ಮಗಳ ಜತೆ ಕಾಣಿಸಿಕೊಂಡ ರಣ್​​​ಬೀರ್​​-ಆಲಿಯಾ; ವೈಟ್​​-ಪಿಂಕ್​​ ಫ್ರಾಕ್​ನಲ್ಲಿ ಕ್ಯೂಟ್​​​ ಬೇಬಿ ”ರಾಹಾ”​..!

    ನಟಿ ಆಲಿಯಾ ಭಟ್ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ರಾಹಾ’ ಎಂದು ಹೆಸರನ್ನಿಟ್ಟಾಗಲೂ ಸಹ ಮಗುವಿನ ಫೋಟೋವನ್ನ ಎಲ್ಲಿಯೂ ರಿವೀಲ್​ ಮಾಡಿರಲಿಲ್ಲ. ಏಪ್ರಿಲ್​ 14ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಬಳಿಕ ನ. 06 ರಂದು ನಟಿ ಆಲಿಯಾ ಭಟ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರದಲ್ಲಿ ಆಲಿಯಾ ಮಗುವನ್ನ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು.

    ಮೊದಲ ಬಾರಿ ಮಗಳ ಜತೆ ಕಾಣಿಸಿಕೊಂಡ ರಣ್​​​ಬೀರ್​​-ಆಲಿಯಾ; ವೈಟ್​​-ಪಿಂಕ್​​ ಫ್ರಾಕ್​ನಲ್ಲಿ ಕ್ಯೂಟ್​​​ ಬೇಬಿ ''ರಾಹಾ''​..!

    ಇದೀಗ ಕಪೂರ್ಸ್​​ ಕ್ರಿಸ್​​​ಮಸ್​​ ಲಾಂಚ್​​ನಲ್ಲಿ ಅಪ್ಪ-ಮಗಳು ಮತ್ತು ಆಲಿಯಾ ಜತೆಯಾಗಿ ಕ್ಯಾಮೆರಾಗೆ ಪೋಸ್​​ ಕೊಟ್ಟ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಮೊದಲ ಬಾರಿ ಮಗಳ ಜತೆ ಕಾಣಿಸಿಕೊಂಡ ರಣ್​​​ಬೀರ್​​-ಆಲಿಯಾ; ವೈಟ್​​-ಪಿಂಕ್​​ ಫ್ರಾಕ್​ನಲ್ಲಿ ಕ್ಯೂಟ್​​​ ಬೇಬಿ ''ರಾಹಾ''​..!


    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಫೋಟೋದಲ್ಲಿ ಸನ್​ಗ್ಲಾಸ್​​ ಹಾಕಿಕೊಂಡಿರುವ ರಣ್​ಬೀರ್​​ ಕಪೂರ್​​ ಮಗಳು ”ರಾಹಾ”ಳನ್ನ ಎತ್ತಿಕೊಂಡಿದ್ದಾರೆ. ಪಿಂಕ್​ ಮತ್ತು ವೈಟ್​ ಫ್ರಾಕ್​ ಧರಿಸಿರುವ ರಾಹಾಗೆ ವೈಟ್​​ ರಬ್ಬರ್​​ ಬ್ಯಾಂಡ್​​​ನಿಂದ ಜುಟ್ಟು ಕಟ್ಟಿದ್ದಾರೆ. ಮಗಳು ”ರಾಹಾ” ಪಕ್ಕದಲ್ಲಿ ನಿಂತ ಆಲಿಯಾ ಮುಳದಲ್ಲಿ ಮಂದಹಾಸ ಮೂಡಿದೆ. ಸದ್ಯ ರಾಹಾ ಳನ್ನ ಮೊದಲ ಬಾರಿ ಕಂಡ ನೆಟ್ಟಿಗರು ಕ್ಯೂಟ್​​ ಬೇಬಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

    ಮೊದಲ ಬಾರಿ ಮಗಳ ಜತೆ ಕಾಣಿಸಿಕೊಂಡ ರಣ್​​​ಬೀರ್​​-ಆಲಿಯಾ; ವೈಟ್​​-ಪಿಂಕ್​​ ಫ್ರಾಕ್​ನಲ್ಲಿ ಕ್ಯೂಟ್​​​ ಬೇಬಿ ''ರಾಹಾ''​..!

    ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಇರುವಾಗ ಸಾಮಾನ್ಯವಾಗಿ ನಟ-ನಟಿಯರು ಮದುವೆ-ಮಕ್ಕಳ ಬಗ್ಗೆ ಆಲೋಚನೆ ಮಾಡುವುದಿಲ್ಲ. ಆದರೆ ಆಲಿಯಾ ಭಟ್​ ಅವರು ಈ ವಿಚಾರದಲ್ಲಿ ಭಿನ್ನವಾಗಿ ನಿಂತಿದ್ದಾರೆ.

    ಬಾಲಿವುಡ್​ನಲ್ಲಿ ಆಲಿಯಾ ಭಟ್​ ಅವರು ಸಖತ್​ ಬೇಡಿಕೆ ಹೊಂದಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ.
    ಮದುವೆ ಆಗಿ, ತಾಯಿ ಕೂಡ ಆಗಿದ್ದು, ಜೊತೆಗೆ ಮಗಳಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ಇದೀಗ ಮೊದಲ ಬಾರಿ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​​ ಮಾಡಿರುವುದು ರಣ್​ಬೀರ್​-ಆಲಿಯಾ ಫ್ಯಾನ್ಸ್​​ಗೆ ಡಬಲ್​ ಖುಷಿ ಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts