More

    ಖಲಿಸ್ತಾನ ಪರ ಗೋಡೆ ಬರಹ: ನಿಷೇಧಿತ ಸಿಖ್​ ಫಾರ್ ಜಸ್ಟೀಸ್ ಸಂಘಟನೆಯ ಮೂವರ ಬಂಧನ

    ಚಂಡೀಗಢ: ಪಂಜಾಬ್​ನ ಬಠಿಂಡಾ ಮತ್ತು ದೆಹಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆದ ಆರೋಪದ ಮೇಲೆ ನಿಷೇಧಿತ ಸಿಖ್​ ಫಾರ್ ಜಸ್ಟೀಸ್ ಸಂಘಟನೆಯ ಮೂವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಇದನ್ನೂ ಓದಿ: 5 ರೂ. ಕುರ್ಕುರೆ ಪ್ಯಾಕೆಟ್ ತರದ ಗಂಡನಿಗೆ ಡಿವೋರ್ಸ್​​​ ಕೊಟ್ಟ ಪತ್ನಿ..!

    ಗುಪ್ತಚರ ದಳದ ಘಟಕ ಹಾಗೂ ಬಠಿಂಡಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ. ಏಪ್ರಿಲ್ 27 ರಂದು ಬಠಿಂಡಾದಲ್ಲಿರುವ ಜಿಲ್ಲಾ ಆಡಳಿತ ಸಂಕೀರ್ಣ ಮತ್ತು ನ್ಯಾಯಾಲಯದ ಸಂಕೀರ್ಣದ ಗೋಡೆಗಳ ಮೇಲೆ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು.

    ದೆಹಲಿಯಲ್ಲಿ ಕಂಡ ಖಲಿಸ್ತಾನ್ ಪರ ಘೋಷಣೆಗಳು: ಮೇ 9ರಂದು ಇದೇ ರೀತಿಯ ಘೋಷಣೆಗಳು ದೆಹಲಿಯ ಝಂಡೆವಾಲ್​ನ ಮತ್ತು ಕರೋಲ್​ ಬಾಗ್​ ಮೆಟ್ರೊ ನಿಲ್ದಾಣಗಳಲ್ಲೂ ಕಂಡು ಬಂದಿದ್ದವು.

    ದೆಹಲಿ ಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಮತ್ತು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಬರೆಯಲಾಗಿದೆ. ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳು ಕಂಡುಬಂದಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಯುನೈಟೆಡ್ ಸ್ಟೇಟ್ಸ್ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ನಿಷೇಧಿತ ಸಿಖ್​ ಫಾರ್ ಜಸ್ಟೀಸ್ ಸಂಘಟನೆಯವರು ಈ ಘೋಷಣೆಗಳನ್ನು ಬರೆದಿದ್ದಾರೆ ಎನ್ನಲಾಗಿದೆ. ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಅವರ ತನಿಖೆಗೆ ಸಹಾಯ ಮಾಡಲು ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.

    ಎಲ್​ಟಿಟಿಇ ಮೇಲಿನ ನಿಷೇಧ ಮತ್ತೆ ಐದು ವರ್ಷ ವಿಸ್ತರಣೆ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts