

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಟಾಪ್ ಆರು ಸ್ಪರ್ಧಿಗಳು ಇದೀಗ 16ನೇ ವಾರಕ್ಕೆ ಕಾಲಿಟ್ಟಿದ್ದು, ಫಿನಾಲೆ ಹಂತವನ್ನು ಯಶಸ್ವಿಯಾಗಿ ತಲುಪಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ನಮ್ರತಾ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದು, ಫಿನಾಲೆ ಓಟದಿಂದ ಔಟ್ ಆಗಿದ್ದಾರೆ. ಸದ್ಯ ಮನೆಯೊಳಗೆ ಇರುವ ಆರು ಸ್ಪರ್ಧಿಗಳಾದ ಕಾರ್ತಿಕ್, ವಿನಯ್, ಸಂಗೀತಾ, ಪ್ರತಾಪ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ಗೆ ಇಂದು ಬೆಳಂಬೆಳ್ಳಗ್ಗೆಯೇ ಶಾಕ್ ಎದುರಾಗಿದೆ.
ಸುದೀಪ್ ಅವರ ಕಿವಿಮಾತುಗಳನ್ನು ಕೇಳಿಕೊಂಡು ಅದರಂತೆ ಫಿನಾಲೆಯ ಕಡೆಯ ವಾರಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಳಿಸಿಕೊಟ್ಟ ವಿಶೇಷ ಆ್ಯಂಕರ್ಗಳಾದ ಜಾನ್ವಿ ಹಾಗೂ ಕೀರ್ತಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ನಿರೂಪಕರು ಕೇಳಿದ ಖಡಕ್ ಪ್ರಶ್ನೆಗಳಿಗೆ ವಿನಯ್, ಕಾರ್ತಿಕ್ ಮತ್ತು ಸಂಗೀತಾ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.
ಪ್ರತಾಪ್ಗೆ ಇರುವ ಜನಬೆಂಬಲ ನೋಡಿ ಅವರನ್ನು ತಮ್ಮ ಎಂದು ಕರೆಯುತ್ತಿದ್ದೀರಾ? ಇದು ಸ್ಟ್ರಾಟರ್ಜಿನಾ? ಎಂದು ಕೇಳಿದ ಪ್ರಶ್ನೆಗೆ ಸಂಗೀತಾ ಇಲ್ಲ ಎಂದರೆ, ಇತ್ತ ಕಾರ್ತಿಕ್ ಮತ್ತು ವಿನಯ್ ತಮಗೆ ಕೇಳಿಬಂದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಒಟ್ಟಾರೆ ನಿರೂಪಕರು ಕೇಳಿದ ಅಷ್ಟು ಪ್ರಶ್ನೆಗಳು ಯಾವುದು? ಇದಕ್ಕೆ ಸ್ಪರ್ಧಿಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.