More

    1992ರಲ್ಲಿ ಕರಸೇವಕರಿಗೆ ಆಶ್ರಯವಾಗಿದ್ದ ಮಣಿಪರ್ವತದಲ್ಲಿ ತಯಾರಾಯ್ತು 1.3 ಮಿಲಿಯನ್ ‘ಮಹಾ ಪ್ರಸಾದ’!

    ಅಯೋಧ್ಯೆ: ರಾಮ ಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ಕರಸೇವಕರ ಆಶ್ರಯ ತಾಣವಾಗಿದ್ದ ಐತಿಹಾಸಿಕ ತಾಣವಾದ ಮಣಿಪರ್ವತದಲ್ಲಿ ರಾಮಮಂದಿರದ ಬಹುನಿರೀಕ್ಷಿತ ಪ್ರತಿಷ್ಠಾಪನಾ ದಿನದಂದು ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಮಹಾ ಪ್ರಸಾದವಾಗಿ ಲಡ್ಡೂಗಳು ತಯಾರಾಗಿದ್ದು, ಈ ಲಡ್ಡುಗಳನ್ನು ಮಣಿಪರ್ವತದಲ್ಲಿ ವಿಶೇಷವಾಗಿ ರಾಮಲಲ್ಲಾಗೆ ಅರ್ಪಿಸಲು ಭಕ್ತಿ ಪೂರ್ವಕವಾಗಿ ಸಿದ್ಧಪಡಿಸಲಾಗಿದೆ.

    ಇದನ್ನೂ ಓದಿ: ಟ್ರಾನ್ಸ್​ಫರ್ ಟಾರ್ಚರ್! ಆರ್​ಟಿಒಗಳಲ್ಲಿ ಡೆಪ್ಯುಟೇಷನ್ ದಂಧೆ, ಲಿಪಿಕ ಸಿಬ್ಬಂದಿಗೆ ಭೀತಿ

    ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಬೇಕಾದ ಅಗತ್ಯ ಸಿದ್ಧತೆಗಳಿಗೆ ಸದ್ಯ ಮಣಿಪರ್ವತ ಪ್ರಮುಖ ಸ್ಥಳವಾಗಿದ್ದು, ಕೇವಲ ಲಡ್ಡು ತಯಾರಿಕೆ ಮಾತ್ರವಲ್ಲದೇ, ದೇವಾಲಯದ ಹಲವು ಪೂಜೆ ಕಾರ್ಯಕ್ರಮಗಳ ಅಗತ್ಯ ಕೆಲಸಗಳು ಇಲ್ಲಿ ನಡೆಯುತ್ತಿವೆ. ರಾಮನ ಸೇವೆಗೆ ಮೀಸಲಾಗಿರುವ ಭಕ್ತರು, ವಿವಿಧ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಅಡುಗೆ ಮಾಡುವುದು, ಲಡ್ಡೂಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಟೀಲ್ ಬಾಕ್ಸ್‌ಗಳಲ್ಲಿ ತುಂಬುವುದು, ಅವುಗಳನ್ನು ಪ್ರತ್ಯೇಕ ಬ್ಯಾಗ್‌ಗಳಿಗೆ ಪ್ಯಾಕ್ ಮಾಡುವುದು ಮತ್ತು ತಾಜಾ ಬ್ಯಾಚ್‌ಗೆ ರವಾನಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಈಗಾಗಲೇ 1.3 ಮಿಲಿಯನ್ ಲಡ್ಡುಗಳು ‘ಮಹಾ ಪ್ರಸಾದ’ದ ಹೆಸರಿನಲ್ಲಿ ತಯಾರಾಗಿದೆ.

    ಇದನ್ನೂ ಓದಿ: ರಣಜಿ ಟ್ರೋಫಿಯಲ್ಲಿ ಗೋವಾ ಎದುರು ಕರ್ನಾಟಕಕ್ಕೆ ಇನಿಂಗ್ಸ್​ ಮುನ್ನಡೆ; ತವರಿನಲ್ಲಿ ಶತಕ ಸಿಡಿಸಿ ಮಿಂಚಿದ ನಿಕಿನ್​ ಜೋಸ್​

    “ನಾವು 1.3 ಮಿಲಿಯನ್ ವಿಶೇಷ ಲಡ್ಡುಗಳನ್ನು ತಯಾರಿಸಿ, ಅದನ್ನು ಸ್ಟೀಲ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲು ಯೋಜಿಸಿದ್ದೇವೆ. ಇವುಗಳನ್ನು ಮಹಾಮಸ್ತಕಾಭಿಷೇಕದ ನಂತರ ವಿಐಪಿಗಳಿಗೆ ವಿತರಿಸಲಾಗುತ್ತದೆ ಮತ್ತು ನಂತರ ಗಡಿಯಲ್ಲಿರುವವರು ಹಾಗೂ ದೇಶಾದ್ಯಂತ ಇರುವ ನಮ್ಮ ಸೈನಿಕರು ಸೇರಿದಂತೆ ಜನಸಾಮಾನ್ಯರಿಗೆ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಭಕ್ತರನ್ನು ಸ್ವಾಗತಿಸಲು ವಿಶೇಷ ಸುಗಂಧ ದ್ರವ್ಯ! ಇದರ ವಿಶೇಷತೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts