More

    ಬಿಲ್ಕಿಸ್ ಬಾನೋ ಪ್ರಕರಣ: ಗೋಧ್ರಾ ಉಪ ಜೈಲಿನಲ್ಲಿ 11 ಅಪರಾಧಿಗಳು ಶರಣು!

    ಗುಜರಾತ್: ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವಿನ ಪ್ರಕಾರ ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಸಬ್ ಜೈಲಿನಲ್ಲಿ ಭಾನುವಾರ (ಜ.22) ತಡರಾತ್ರಿ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಭಕ್ತರನ್ನು ಸ್ವಾಗತಿಸಲು ವಿಶೇಷ ಸುಗಂಧ ದ್ರವ್ಯ! ಇದರ ವಿಶೇಷತೆ ಹೀಗಿದೆ

    ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳು ಭಾನುವಾರ ರಾತ್ರಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಸಬ್ ಜೈಲಿನಲ್ಲಿ ಶರಣಾಗಿದ್ದಾರೆ ಎಂದು ಗೋದ್ರಾದ ಸೆಂಟ್ರಲ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್​ ಬಿಲ್ಕಿಸ್​ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳು ಪೊಲೀಸರ ಮುಂದೆ ಶರಣಾಗಬೇಕು ಎಂದು ಗಡುವು ನೀಡಿತ್ತು. ಅದರಂತೆ ಇದೀಗ 11 ಅಪರಾಧಿಗಳು ಕೂಡ ಜೈಲು ಸೇರಿದ್ದಾರೆ.

    ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಮಯವನ್ನು ವಿಸ್ತರಿಸುವಂತೆ ಕೋರಿ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ಮುನ್ನೆಲೆಗೆ ಬಂದಿದೆ. 2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಈ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಯಿತು.

    ಇದನ್ನೂ ಓದಿ:  ರಷ್ಯಾ ಅಧ್ಯಕ್ಷ ಜಗತ್ತಿನ ಶ್ರೀಮಂತ ರಾಜಕಾರಣಿ: 200 ಶತಕೋಟಿ ಡಾಲರ್ ಆಸ್ತಿ ಒಡೆಯ

    ಅಂದು ಹತ್ಯೆಗೈದ ಅಪರಾಧಿಗಳಿಗೆ ಗುಜರಾತ್ ಸರ್ಕಾರವು ಕ್ಷಮೆಯನ್ನು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ನಂತರ ಆಗಸ್ಟ್ 2022ರಲ್ಲಿ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಬಿಲ್ಕಿಸ್ ಬಾನೋ ತೀವ್ರ ಅಸಮಾಧಾನ ಹೊರಹಾಕಿ, ನಿರಂತರವಾಗಿ ಕಾನೂನು ಹೋರಾಟ ನಡೆಸಿದ್ದರು,(ಏಜೆನ್ಸೀಸ್).

    1992ರಲ್ಲಿ ಕರಸೇವಕರಿಗೆ ಆಶ್ರಯವಾಗಿದ್ದ ಮಣಿಪರ್ವತದಲ್ಲಿ ತಯಾರಾಯ್ತು 1.3 ಮಿಲಿಯನ್ ‘ಮಹಾ ಪ್ರಸಾದ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts