BBKS10: 'ಇನ್ಯಾವತ್ತು ನಿನ್ನನ್ನು ಕ್ಷಮಿಸಲ್ಲ ಡ್ರೋಣ್'; ನಮ್ರತಾ ಕಣ್ಣೀರಿಗೆ ಪ್ರತಾಪ್​ ಕಾರಣ?

Untitled design (79)
Published on

ಬೆಂಗಳೂರು: ಬಿಗ್​ ಬಾಸ್ ಸೀಸನ್​ 10 ಇದೀಗ 8ನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳು 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮನೆಯೊಳಗೆ ಎಂದಿನಂತೆ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಈ ಮಧ್ಯೆ ಸದಸ್ಯರಿಗೆ ಮತ್ತಷ್ಟು ಕಾಂಪಿಟೇಷನ್​ ಹೆಚ್ಚಿಸಲು ಬಿಗ್​ ಬಾಸ್ ಇಬ್ಬರು ವೈಲ್ಡ್​ಕಾರ್ಡ್​ ಸ್ಪರ್ಧಿಗಳನ್ನು ಒಳಗೆ ಕಳುಹಿಸಿದ್ದು, ಇದೀಗ ಪೈಪೋಟಿಗೆ ಕಿಂಚಿತ್ತು ಕೊರತೆಯಿಲ್ಲ ಎಂಬಂತೆ ಆಟ ಬಿರುಸಿನಿಂದ ಸಾಗುತ್ತಿದೆ.

ನಿನ್ನೆ ನಡೆದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ತಮ್ಮ ತಂಡದ ನಾಯಕನಾಗಿದ್ದ ಪ್ರತಾಪ್​, ಕ್ಯಾಪ್ಟನ್ಸಿ ಓಟದಿಂದ ನಮ್ರತಾ ಅವರನ್ನು ಹೊರಗಿಟ್ಟರು. ಈ ವಿಚಾರಕ್ಕೆ ತೀವ್ರ ಬೇಸರ ಹೊರಹಾಕಿದ ನಮ್ರತಾ, ಇತರೆ ಸ್ಪರ್ಧಿಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್​ಗಾಗಿ ಎರಡು ತಂಡಗಳನ್ನಾಗಿ ಮಾಡಿದ ಬಿಗ್​ ಬಾಸ್​ ಎರಡು ತಂಡಕ್ಕೆ ನಾಯಕರು ಯಾರಾಗುತ್ತಾರೆ ಎಂಬುದನ್ನು ಬಹುಮತಗಳಿಂದ ತಿಳಿಸಿ ಎಂದು ಹೇಳಿದ್ದರು. ಎಲ್ಲರ ಒಮ್ಮತದಿಂದ ಪ್ರತಾಪ್ ಮತ್ತು ಮೈಕಲ್ ನಾಯಕರಾಗಿ ಆಯ್ಕೆಯಾದರು. ಈ ವೇಳೆ ನಾನು ಡ್ರೋಣ್​ ತಂಡವನ್ನು ಸೇರಲು ಬಯಸುತ್ತೇನೆ, ಪ್ರತಾಪ್​ ನನಗೆ ಈ ಹಿಂದೆ ಹೇಳಿದ್ದ ಮಾತಿನಂತೆ ಅವಕಾಶ ಕೊಡುತ್ತಾರೆ, ನನ್ನಲ್ಲಿರುವ ಬೇರೆ ನಮ್ರತಾರನ್ನು ಹೊರ ತರುತ್ತಾರೆ ಎಂಬುದನ್ನು ನೋಡಲು ಅವರೊಂದಿಗೆ ಕೈಜೋಡಿಸುತ್ತೇನೆ ಎಂದರು.

ತಂಡಕ್ಕೆ ಬಂದ ಬಳಿಕ ಆಡಿದ ಮೊದಲ ಚಟುವಟಿಕೆಯಲ್ಲಿ ನಮ್ರತಾ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಪ್ರತಾಪ್​ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಸೂಕ್ತ ಕಾರಣಗಳೊಂದಿಗೆ ಹೊರಗಿಟ್ಟರು. ಇದರಿಂದ ನೊಂದ ನಮ್ರತಾ, "ಅಷ್ಟು ಕೆಟ್ಟದಾಗಿ ಆಡೋದಾದ್ರೆ? ನನ್ನನ್ನು ಯಾಕೆ ತಂಡಕ್ಕೆ ಸೇರಿಸಿಕೊಂಡೆ, ಇನ್ಯಾವತ್ತು ನಿನ್ನನ್ನು ಕ್ಷಮಿಸಲ್ಲ ಡ್ರೋನ್" ಎಂದರು​

"ನೀನು ಬಣ್ಣಬಣ್ಣದ ಮಾತು ಹೇಳ್ದೆ ಗೊತ್ತಾ, ನಿಮ್ಮಲ್ಲಿ ಟ್ಯಾಲೆಂಟ್ ಇದೆ, ನಿಮ್ಮಲ್ಲಿರುವ ಬೇರೆ ನಮ್ರತಾನ ಹೊರಗಡೆ ತರ್ತಿನಿ, ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ ಅಂತೆಲ್ಲಾ.. ಇದೇನಾ? ಇದಾ ನೀನು ನನಗೆ ಪ್ರಾಮೀಸ್​ ಮಾಡಿದ್ದು, ನಿನ್ನ ನಿರ್ಧಾರ ಒಪ್ಪಿದ್ದೀನಿ, ಆದ್ರೇ, ನನಗೆ ನೋವಾಗಿದೆ" ಎಂದು ಕಣ್ಣೀರಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net