More

    ವಿಮಾನದಲ್ಲಿ ಗಂಡ-ಹೆಂಡತಿ ನಡುವೆ ಜಗಳ; ಫ್ಲೈಟ್​ನಲ್ಲಿ ನಿಜಕ್ಕೂ ನಡೆದಿದ್ದೇನು?

    ನವದೆಹಲಿ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಹೊರಹೊಮ್ಮು ಸಂತೋಷ ಮುಖ್ಯವಾಗುತ್ತದೆ. ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ..ಈ ಗಾದೆ ನೆನಪಿದ್ಯಾ? ದಂಪತಿ ನಡುವೆ ಜಗಳ ಹೆಚ್ಚು ಕಾಲ ಮುಂದುವರೆಯುತ್ತಿರಲಿಲ್ಲ. ಆದರೆ ಇಂದಿನ ಕಾಲ ಬದಲಾಗಿದೆ. ಪತಿ- ಪತ್ನಿಯ ನಡುವಿನ ಮನಸ್ಥಾಪ ಯಾವ ಹಂತಕ್ಕೂ ಕೂಡಾ ಹೋಗಬಹುದಾಗಿದೆ. ಹೀಗೆ ಇಲ್ಲೊಂದು ಜೋಡಿ ಗಲಾಟೆಯಿಂದ ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಬೇಕಾಗಿದೆ.

    ಲುಫ್ಥಾನ್ಸ ವಿಮಾನ ಸಂಖ್ಯೆ LH772 ಮ್ಯೂನಿಚ್‌ನಿಂದ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ ಹೋಗುತ್ತಿತ್ತು. ವಿಮಾನದಲ್ಲಿ ಪತಿ-ಪತ್ನಿಯರ ನಡುವೆ ಜಗಳ ನಡೆದಿದೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿ ಮಾರಾಮಾರಿ ನಡೆದಿದೆ. ವಿಮಾನದ ಒಳಗಿನ ಪರಿಸ್ಥಿತಿ ಹದಗೆಟ್ಟ ನಂತರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ತುರ್ತು ಭೂಸ್ಪರ್ಶ ಮಾಡಬೇಕಾಯಿತು.

    ಪಾಕಿಸ್ತಾನದಲ್ಲಿ ಈ ವಿಮಾನವನ್ನು ಇಳಿಸಲು ಪ್ರಯತ್ನಿಸಲಾಗಿತ್ತು, ಆದರೆ ಅಲ್ಲಿನ ವಿಮಾನ ನಿಲ್ದಾಣ ಪ್ರಾಧಿಕಾರ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ವಿಮಾನವನ್ನು ದೆಹಲಿ ಕಡೆಗೆ ತಿರುಗಿಸಲಾಯಿತು.

    ದೆಹಲಿ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಈ ಸುದ್ದಿಯನ್ನು ಸ್ವೀಕರಿಸಿದ ತಕ್ಷಣ, ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣವನ್ನು ತಲುಪಿ ಫ್ಲೈಟ್ ಗೇಟ್ ತೆರೆದಿದ್ದಾರೆ.

    ಆದರೆ, ಪತಿ-ಪತ್ನಿ ಎಲ್ಲಿಂದ ಬಂದವರು ಮತ್ತು ಅವರ ನಡುವಿನ ಜಗಳಕ್ಕೆ ಕಾರಣವೇನು ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ಘಟನೆಯ ನಂತರ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಲುಫ್ತಾನ್ಸ ಏರ್ ಯಾವುದೇ ಹೇಳಿಕೆಯನ್ನು ನೀಡಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts