BBKS10: ಕೇಳಿಬಂತು 'ಹಿತ್ತಾಳೆ ಕಿವಿ'; ಧ್ವನಿ ಏರಿಸಿದ ಕಾರ್ತಿಕ್!

Untitled design - 2023-10-30T152710.568
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ವಾರದ ಮೊದಲ ದಿನವೇ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಜಟಾಪಟಿ ಬುಗಿಲೆದ್ದಿದೆ. ಟಾಸ್ಕ್​ಗಳ ಮಧ್ಯೆ ನಡೆಯಬೇಕಿದ್ದ ಮಾತುಗಳ ಸಮರ ಇದೀಗ ಕೆಲವು ಸಣ್ಣ ವಿಚಾರಕ್ಕೆ ಸ್ಪೋಟಗೊಂಡಿದೆ.

ಬಿಗ್​ ಮನೆಯ ಬಿಗ್​ ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ಎದುರಾಗಿದ್ದು, ಟಾಸ್ಕ್​ಗಳು ಕೂಡ ಕಠಿಣವಾಗುತ್ತಿದೆ. ವಾರದ ಮೊದಲ ದಿನ ಸೋಮವಾರದಂದು ಮನೆಯ ಕ್ಯಾಪ್ಟನ್​ ಆದ ನೀತು ಮತ್ತು ಕಾರ್ತಿಕ್​ ನಡುವೆ ಮನಸ್ತಾಪದ ಕಿಚ್ಚು ಹೊತ್ತಿಕೊಂಡಿದೆ. ಅಡುಗೆ ಮನೆಯಲ್ಲಿ ನಾನು ಮಾತನಾಡಬಾರದು ಎಂದು ಹೇಳೋದಕ್ಕೆ ನೀವ್ಯಾರು ಎಂದ ಕಾರ್ತಿಕ್​ಗೆ, ಹೇಳಿದ ಮೇಲೆ ಹೆಚ್ಚು ಮಾತನಾಡಬೇಡಿ ಎಂದು ನೀತು ಹೇಳಿದರು.

ಈ ಮಾತು ಕೇಳುತ್ತಿದ್ದಂತೆ ತಾಳ್ಮೆಯನ್ನು ಕಳೆದುಕೊಂಡ ಕಾರ್ತಿಕ್​ ಜೋರಾಗಿ ಕಿರುಚಾಡುತ್ತ, ನೀವು ಕ್ಯಾಪ್ಟನ್​ ಎಂಬ ಕಾರಣಕ್ಕೆ ನಿಮ್ಮ ಬಳಿ ಹೇಳಿದೆ. ನಿಮಗೆ ಸಮಸ್ಯೆ ಬಗೆಹರಿಸಲು ಆಗಲಿಲ್ಲ ಎಂದರೆ ಸುಮ್ಮನಿದ್ದುಬಿಡಿ ಎಂದು ಏರು ಧ್ನನಿಯಲ್ಲಿ ಹೇಳಿದರು.

ಈ ಮಧ್ಯೆ ನೀತು ಅವರಿಂದ ಬಂದ ಹಿತ್ತಾಳೆ ಕಿವಿ ಪದಕ್ಕೆ ತೀವ್ರ ಕುಪಿತಗೊಂಡ ಕಾರ್ತಿಕ್​ ಮನೆ ಮಂದಿಗೆಲ್ಲಾ ಕೇಳುವಂತೆ ಚೀರಾಡಿದ್ದಾರೆ. ಇಬ್ಬರ ನಡುವಿನ ಜಗಳಕ್ಕೆ ಅಸಲಿ ಕಾರಣವೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net