More

  ಶೃತಿ ಹಾಸನ್​ ಶಾಕಿಂಗ್​​ ಹೇಳಿಕೆ..! ನಾನು ಮದ್ಯ ಸೇವಿಸಲು ನನ್ನ ಅಪ್ಪ ಅಮ್ಮನೇ ಕಾರಣ, ಹೀಗಂದಿದ್ಯಾಕೆ..?

  ನಟಿ ಶ್ರುತಿ ಹಾಸನ್ ದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಜನಪ್ರಿಯ ನಟಿಯರಲ್ಲಿ ಈಕೆ ಕೂಡ ಒಬ್ಬರಾಗಿ, ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ.


  ನಟ ಕಮಲ್ ಹಾಸನ್ ಪುತ್ರಿ ಮಾನಸಿಕ ಆರೋಗ್ಯ ಕೆಟ್ಟಿದ್ದು, ಆಲ್ಕೋಹಾಲ್‌ಗೆ ದಾಸಿಯಾಗಿದ್ದಾರೆ ಅನ್ನೋ ಸುದ್ದಿಗಳೆಲ್ಲ ಹಬ್ಬಿದ್ದವು. ಈ ವಿಚಾರವಾಗಿ ಈ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದಾಗ “ಕುಡಿತದ ಚಟಕ್ಕೆ ಬಿದ್ದಿದ್ದು ಅಪ್ಪ-ಅಮ್ಮನಿಂದಲೇ” ಎಂದು ಮಾತನಾಡಿದ್ದು, ಸದ್ಯ ಹೇಳಿಕೆಗಳು ವೈರಲ್ ಆಗಿವೆ.


  18 ವರ್ಷ ಇದ್ದಾಗ ಅಪ್ಪ ಕಮಲ್ ಹಾಸನ್ ಹಾಗೂ ಅಮ್ಮ ಸಾರಿಕಾ ಇಬ್ಬರೂ ವೈವಾಹಿಕ ಜೀವನದಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದು, ಈ ವಿಚಾರ ಈಕೆಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿಯೇ ನಾನು ಕುಡಿತದ ಚಟಕ್ಕೆ ಬಿದ್ದಿದ್ದೇನೆ ಎಂದು ಶೃತಿ ಹೇಳಿಕೆಯೊಂದನ್ನ ನೀಡಿದ್ದಾರೆ.
  ಅಪ್ಪ-ಅಮ್ಮ ವಿಚ್ಛೇದನದಿಂದ ಈ ನಟಿ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಲವರು ಸಲಹೆ ನೀಡಿದ್ದರಿಂದ ಈಕೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿದ್ದರು.


  ಸದ್ಯ ಅಪ್ಪ ಅಮ್ಮನ ವಿಚ್ಛೇದನದ ವುಇಚಾರಗಳಿಂದ ನಾನು ಕುಡಿಯೋದನ್ನ ಕಲಿತೆ. ನನಾ ಕುಡಿಯೋದಕ್ಕೆ ನನ್ನ ಅಪ್ಪ ಅಮ್ಮನೇ ಕಾರಣ ಎಂದು ಶೃತಿ ಹೇಳಿದ್ದಾರೆ.


  ಶೃತಿ ಮದ್ಯಸೇವನೆಯ ಚಟದಿಂದ ಹೊರಬರಲು ಚಿಕಿತ್ಸೆಗಾಗಿ ಲಂಡನ್‌ಗೆ ತೆರೆಳಿದ್ದು, ಈಗ ಅದರಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ.
  ಇನ್ನು ಮಾನಸಿಕ ತಜ್ಞರನ್ನ ಭೇಟಿ ಮಾಡಿದ ಮಾತ್ರಕ್ಕೆ ನಾಮ್ಮನ್ನ ಹುಚ್ಚಿ ಎಂದು ಪರಿಗಣಿಸ ಬಾರದೆಂದು ಶೃತಿ ಹೇಳಿದ್ದಾರೆ. ಸದ್ಯ ಶೃತಿ ಹಾಸನ್​ ಹೇಳಿಕೆ ದೊಡ್ಡ ಮಟ್ಟಿನಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಈಕೆಯ ಹೇಳಿಕೆಗೆ ಕಾಮೆಂಟ್​​ ಮಾಡುತ್ತಿದ್ದಾರೆ.


  ಸದ್ಯ ಈ ನಟಿಯ ಹೇಳಿಕೆ ಮಕ್ಕಳ ಮೇಲೆ ಪ್ರಭಾವ ಬೀಳಲಿದೆ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದು, ನೋಡಿಕೊಂಡು ಸ್ಟೇಟ್​​​ಮೆಂಟ್​ಗಳನ್ನ ಮಾಡಿ ಎಂದು ಕೆಲ ಪೋಷಕರು ಶೃತಿ ವಿರುದ್ಧವಾಗಿ ಕಿಡಿ ಕಾರಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts