

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ಗಳು ಪೂರ್ಣಗೊಂಡಿದ್ದೇ ಆದರೂ ಸ್ಪರ್ಧಿಗಳ ನಡುವಿನ ಕೋಪ-ತಾಪ ಯಾಕೋ ಕಡಿಮೆಯಾಗುವ ಲಕ್ಷಣವೇ ಕಾಣುವಂತಿಲ್ಲ. ವಾರದ ಮೊದಲು ಸಂಗೀತಾ-ವಿನಯ್ ಮತ್ತು ಸಂಗೀತಾ-ವಿನಯ್-ಕಾರ್ತಿಕ್ ಮಧ್ಯೆ ಏಕವಚನದ ಹಾವಳಿ ಸಂಭವಿಸಿತು. ಆದ್ರೆ, ಟಾಸ್ಕ್ ಮುಗಿದಂತೆ ಈ ಸ್ಪರ್ಧಿಗಳು ಇದೀಗ ಶಾಂತರಾಗಿದ್ದಾರೆ. ಮನೆಯಲ್ಲಿ ಸದಾ ಮೌನದಿಂದಲೇ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೈಕಲ್ ಮತ್ತು ಇಶಾನಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಕಾರ್ತಿಕ್ ಮತ್ತು ಇಶಾನಿ ಮಧ್ಯೆ ಮಾತಿನ ಸಮರ ಸಂಭವಿಸಿತು. ಈ ವೇಳೆ ಕಾರ್ತಿಕ್ ಮಾತಿಗೆ ಕೆರಳಿದ ಇಶಾನಿ ಏಕಾಏಕಿ ಕಿರುಚಾಡಿದರು. ಮೈಕಲ್ ಇಶಾನಿಯನ್ನು ಸಮಾಧಾನ ಪಡಿಸುವಾಗ ತಾಳ್ಮೆ ಕಳೆದುಕೊಂಡ ಕೂಡಲೇ ಅವಳು ಸೈಕೋ ಎಂದು ಕರೆದರು. ಮೈಕಲ್ ಹೇಳಿದ ಪದಕ್ಕೆ ತೀವ್ರ ಬೇಸರಗೊಂಡ ಇಶಾನಿ, ಸ್ನೇಹಿತರ ಹೆಗಲ ಮೇಲೆ ಕಣ್ಣೀರಿಟ್ಟರು. ಇದರ ಬೆನ್ನಲ್ಲೇ ಫನ್ ಫ್ರೈಡೆ ಚುಟುವಟಿಕೆಯಲ್ಲಿ ಸಂಗೀತಾ ತಂಡಕ್ಕೆ ಸತತ ಸೋಲಿನ ನಂತರ ಗೆಲುವಿನ ಸಮಾಧಾನ ದೊರಕಿದೆ!
ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಅದು ಸಂಗೀತಾ ಗ್ಯಾಂಗ್ನ ತಳಮಳಕ್ಕೂ ಕಾರಣವಾಗಿದೆ. ಟಾಸ್ಕ್ನ ನಂತರ ಮನೆಯವರೆಲ್ಲರ ಬಹುಮತದ ಅಭಿಪ್ರಾಯದ ಮೇರೆಗೆ ವಿನಯ್ ‘ಅತ್ಯುತ್ತಮ ಪ್ರದರ್ಶನ’ದ ಪದಕ ಕೊರಳಿಗೇರಿಸಿಕೊಂಡರೆ, ಸಂಗೀತ ಜೈಲಿನುಡುಗೆ ತೊಟ್ಟು ಬಂಧಿಯಾಗಿದ್ದಾರೆ.
ಮನೆಯ ಸ್ಪರ್ಧಿಗಳಿಗೆ ‘ಏಳೋಂದ್ಲ ಏಳು’ ಎಂಬ ಟಾಸ್ಕ್ ನೀಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿನ್ನು ಭಾಗ್ಯಶ್ರೀ ಅವರಿಗೆ ನೀಡಿತ್ತು. ತುಕಾಲಿ ಸಂತೋಷ್ ಸಂಗೀತಾ ಅವರ ತಂಡದಿಂದ ಆಡಿದರು. ಆಟದ ನಿಯಮಗಳು: ‘ಏಳೊಂದ್ಲ ಏಳು’ ಇದು ಸಂಖ್ಯೆಗಳ ಆಟ. ಸಂಗೀತಾ ತಂಡದವರು ನೀಲಿ ಬಣ್ಣದ ಟೀ ಷರ್ಟ್ ಮತ್ತು ವಿನಯ್ ತಂಡದವರು ಕೆಂಪು ಬಣ್ಣದ ಟೀ ಷರ್ಟ್ ಧರಿಸಿದ್ದರು. ಅವರ ಟೀ ಷರ್ಟ್ ಮೇಲೆ ಒಂದೊಂದು ಅಂಕಿ ಬರೆಯಲಾಗಿತ್ತು.
ಭಾಗ್ಯಶ್ರೀ ಒಮ್ಮೆ ಒಂದಿಷ್ಟು ಸಂಖ್ಯೆಗಳನ್ನು ಹೇಳುತ್ತಾರೆ. ತಂಡದ ಸದಸ್ಯರೆಲ್ಲ ತಮ್ಮ ಟೀ ಷರ್ಟ್ ಮೇಲಿನ ಅಂಕಿಗಳಿಗೆ ಅನುಗುಣವಾಗಿ ಭಾಗ್ಯಶ್ರೀ ಹೇಳಿದ ಸಂಖ್ಯೆಯಂತೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು. ತಂಡದ ಸದಸ್ಯರ ನಡುವಿನ ಹೊಂದಾಣಿಕೆಯನ್ನು ಬಿಂಬಿಸುವ ಈ ಆಟಕ್ಕೆ ಎರಡೂ ತಂಡದವರು ಸಾಕಷ್ಟು ಉತ್ಸಾಹದಿಂದಲೇ ಸಿದ್ಧರಾದರು.
ಒಂದು ಕಡೆಯಲ್ಲಿ ವಿನಯ್, ಸಿರಿ, ನೀತು, ಸ್ನೇಹಿತ್, ಇಶಾನಿ, ರಕ್ಷಕ್, ನಮ್ರತಾ ನಿಂತಿದ್ದರೆ ಮತ್ತೊಂದು ಕಡೆಯಲ್ಲಿ ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್, ಡ್ರೋಣ್ ಪ್ರತಾಪ್, ಕಾರ್ತಿಕ್ ನಿಂತಿದ್ದರು. ಭಾಗ್ಯಶ್ರೀ ಹೇಳಿದ ನಂಬರ್ಗೆ ಅನುಗುಣವಾಗಿ ತಮ್ಮನ್ನು ತಾವು ಜೋಡಿಸಿಕೊಂಡು ನಿಲ್ಲುವಲ್ಲಿ ಮೊದಲು ಯಶಸ್ವಿಯಾಗಿದ್ದು ಸಂಗೀತಾ ತಂಡ. ಹಾಗಾಗಿ ಸಂಗೀತಾ ತಂಡದವರು ಈ ಆಟದಲ್ಲಿ ಗೆಲುವು ಸಾಧಿಸಿದರು.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.