More

    ಸಂಭ್ರಮಿಸಲು ಶುರು ಮಾಡಿ… ಭಾರತೀಯರಲ್ಲಿ ವಿಶೇಷ ಮನವಿ ಮಾಡಿದ ಶೋಯೆಬ್​ ಅಖ್ತರ್!

    ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ನ.2) ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್​ ಪಂದ್ಯದಲ್ಲಿ ಟೀಮ್​ ಇಂಡಿಯಾ 302 ರನ್​ಗಳ ಅಂತರದಿಂದ ಅಮೋಘ ಗೆಲುವು ದಾಖಲಿಸಲು ನೆರವಾದ ಮೂವರು ವೇಗದ ಬೌಲರ್​ಗಳನ್ನು ಪಾಕಿಸ್ತಾನದ ಶ್ರೇಷ್ಠ ಮಾಜಿ ಆಟಗಾರ ಶೋಯೆಬ್​ ಅಖ್ತರ್, ಮನಸೋ ಇಚ್ಛೆ ಕೊಂಡಾಡಿದ್ದಾರೆ.

    ಮೊಹಮ್ಮದ್​ ಸಿರಾಜ್​, ಜಸ್ಪ್ರಿತ್​ ಬೂಮ್ರಾ ಮತ್ತು ಮೊಹಮ್ಮದ್​ ಶಮಿ ಅವರು ಒಟ್ಟಾರೆ 9 ವಿಕೆಟ್​ ಕಬಳಿಸುವ ಮೂಲಕ ಕೇವಲ 19.4 ಓವರ್​ಗಳಲ್ಲೇ ಲಂಕಾ ಬ್ಯಾಟರ್​ಗಳನ್ನು ಕಟ್ಟಿಹಾಕಿದರು. ಈ ಪಂದ್ಯದಲ್ಲಿ ಶಮಿ ಕೇವಲ 5 ಓವರ್​ಗಳಲ್ಲಿ 18 ರನ್​ ನೀಡಿ, 5 ವಿಕೆಟ್​ ಕಬಳಿಸಿ, ಮಿಂಚಿದರು. ಮೂವರು ಬೌಲರ್​ಗಳ ಅತ್ಯುತ್ತಮ ಪ್ರದರ್ಶನ ನೀಡಿ ಲಂಕಾವನ್ನು ಕೇವಲ 55 ರನ್​ಗೆ ಆಲೌಟ್​ ಮಾಡಿದ್ದನ್ನು ನೋಡಿ ಪ್ರಭಾವಿತಗೊಂಡಿರುವ ರಾವಲ್ಪಿಂಡಿ ಎಕ್ಸ್​ಪ್ರೆಸ್​, ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡು ಬೌಲರ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಹಂತದಿಂದ ಭಾರತದ ಆಕ್ರಮಣವನ್ನು ತಡೆಯಲು ಸಾಧ್ಯವಿಲ್ಲ. ಭಾರತೀಯರಲ್ಲಿ ನನ್ನೊದೊಂದು ಮನವಿ, ನಿಮ್ಮ ವೇಗದ ಬೌಲರ್​ಗಳ ಬಗ್ಗೆ ಸಂಭ್ರಮಿಸಲು ಶುರು ಮಾಡಿ, ಏಕೆಂದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಅವರು ಎಸೆದ ಪ್ರತಿಯೊಂದು ಎಸೆತವು ಸಾಕಷ್ಟು ಗದ್ದಲ ಸೃಷ್ಟಿ ಮಾಡಿದೆ ಮತ್ತು ಎಲ್ಲರು ಸಂತಸಗೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಶಮಿ ನೋಡಿ ತುಂಬಾ ಖುಷಿಯಾಯಿತು. ಅವರು ತಮ್ಮ ಲಯಕ್ಕೆ ಮರಳಿದ್ದಾರೆ. ಸಿರಾಜ್ ಅವರು ಓಡುತ್ತಿದ್ದರೆ, ಬುಮ್ರಾ ಮಾರಕ ದಾಳಿ ಮಾಡುತ್ತಿದ್ದಾರೆ. ಅವರಿಬ್ಬರು ಮುಕ್ತವಾಗಿ ಬೌಲ್ ಮಾಡುತ್ತಿದ್ದಾರೆ ಎಂದು ಅಖ್ತರ್​ ಅಭಿಪ್ರಾಯ ಹೊರಹಾಕಿದರು.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಗುರುವಾರ (ನ.2) ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ, ಶುಭಮನ್​ ಗಿಲ್ (92 ರನ್, 92 ಎಸೆತ, 11 ಬೌಂಡರಿ, 2 ಸಿಕ್ಸರ್), ವಿರಾಟ್​ ಕೊಹ್ಲಿ (88 ರನ್, 94 ಎಸೆತ, 11 ಬೌಂಡರಿ), ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ಫಲವಾಗಿ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್​ಗಳ ಬೃಹತ್​ ಮೊತ್ತ​ ಪೇರಿಸಿತ್ತು.

    ಬೃಹತ್​ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು, ಎದುರಾಳಿ ತಂಡವನ್ನು 19.4 ಓವರ್​ಗಳಲ್ಲಿ 55 ರನ್​​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ಜಸ್ಪ್ರೀತ್​ ಬುಮ್ರಾ (5-1-8-1), ಮೊಹಮ್ಮದ್​ ಶಮಿ (5-1-18-5), ಮೊಹಮ್ಮದ್ ಸಿರಾಜ್ (7-2-16-3), ಕುಲ್​ದೀಪ್ ಯಾದವ್(2-0-3-0), ರವೀಂದ್ರ ಜಡೇಜಾ (0.4-0-4-1) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. (ಏಜೆನ್ಸೀಸ್​)

    ಮುಕೇಶ್​ ಅಂಬಾನಿಗೆ ಮೂರನೇ ಬಾರಿಗೆ ಕೊಲೆ ಬೆದರಿಕೆ-ಈ ಬಾರಿ ಒತ್ತಾಯಿಸಿದ ಮೊತ್ತವೆಷ್ಟು?

    ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಕಮಲ್ ಹಾಸನ್ ಪುತ್ರಿ; ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ…

    ನೆರೆಯ ದೇಶ ನೇಪಾಳದಲ್ಲಿ ಏಕೆ ಇಷ್ಟೊಂದು ಭೂಕಂಪಗಳು ಸಂಭವಿಸುತ್ತವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts