BBKS10: ಬಿಗ್‌ ಮನೆಯೊಳಗೆ ಪ್ರಾಣಿಗಳ ಸದ್ದು!; ಏನಿದು ಆಶ್ಚರ್ಯ?

Untitled design (23)
Published on

ಬೆಂಗಳೂರು: ಇದೀಗ ಬಿಗ್‌ಬಾಸ್ ಮನೆಯೊಳಗೆ ಸೃಷ್ಟಿಯಾಯಿತು ಪ್ರಾಣಿ ಪ್ರಪಂಚ! ಈ ಹಿಂದೆ ಬಿಗ್‌ಬಾಸ್​ಗೆ ‘ಚಾರ್ಲಿ’ ಬರ್ತಾಳೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. ಆದ್ರೆ ಚಾರ್ಲಿಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್ ಸಂಗೀತಾ ಶೃಂಗೇರಿ ಸದ್ಯ ಶ್ವಾನದಂತೆ ವರ್ತಿಸುತ್ತಿದ್ದಾರೆ.

ಇದೇನು ಇಷ್ಟು ಕೀಳು ಭಾಷೆಯಲ್ಲಿ ಸ್ಪರ್ಧಿಯನ್ನು ಹೀಗಳೆಯುತ್ತಿದ್ದಾರೆ ಎಂದು ಬೇಸರಗೊಳ್ಳಬೇಡಿ. ಇದು ನೋಯಿಸಲು ಹೇಳಿದ್ದಲ್ಲ. ಇದೊಂದು ಟಾಸ್ಕ್​ ಎಂಬುದು ಮಾತ್ರ ಅಕ್ಷರಶಃ ಸತ್ಯ. ಮನೆಯೊಳಗೆ ಸಂಗೀತಾ ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ. ಇದೇನೂ ಹೊಸ ಸಮಸ್ಯೆ ಎನ್ನಬೇಡಿ. ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿರುವ ಹೊಸ ಟಾಸ್ಕ್‌ ಆಗಿದೆ.

‘ಬಿಗ್‌ಬಾಸ್‌ ಸೂಚಿಸಿದ ಚಟುವಟಿಕೆಗಳನ್ನು ಮನೆಯ ಸ್ಪರ್ಧಿಗಳು ಮಾಡಬೇಕು’ ಎಂಬುದು ಈ ವಾರದ ಮೊದಲ ಟಾಸ್ಕ್‌. ಇದರ ಭಾಗವಾಗಿಯೇ ಸಂಗೀತಾ ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ ಆಡುತ್ತ ಅವರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ನಾಗಿಣಿಯಾಗಿ ಅವಿನಾಶ್​ ಬದಲಾದರೆ ಕಾರ್ತಿಕ್ ಪೆಂಗ್ವಿನ್ ಹಾಗೆ ಕುಪ್ಪಳಿಸುತ್ತಿರುವುದೆಲ್ಲವೂ ಇಂದಿನ ಪ್ರೋಮೊದಲ್ಲಿ ಸೆರೆಯಾಗಿದೆ.

9ನೇ ವಾರದ ಆರಂಭ ಭರಪೂರ ನಗೆಯೊಂದಿಗೆ ಆರಂಭಗೊಂಡಿದ್ದೆ ಆದ್ರೂ ಈ ನಗೆಯು ಕೋಪದ ಹೊಗೆಯಾಗಿ ಬದಲಾಗಲು ಜಾಸ್ತಿ ಹೊತ್ತೇನೂ ಬೇಕಾಗಿಲ್ಲ ಎಂಬುದು ವೀಕ್ಷಕರಿಗೆ ತಿಳಿದರುವ ಸತ್ಯ. ಬಿಗ್‌ಬಾಸ್‌ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದನ್ನು ಸದ್ಯ ಹೇಳುವುದೇ ಕಷ್ಟಕರ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net