More

    ರಾಜಸ್ಥಾನ ಮುಖ್ಯಮಂತ್ರಿ ರೇಸ್​ನಲ್ಲಿ ಆರ್ವರು: ಯಾರಿಗೆ ಮಣೆ ಹಾಕಲಿದೆ ಬಿಜೆಪಿ ಹೈಕಮಾಂಡ್​?

    ನವದೆಹಲಿ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಭಾರತೀಯ ಜನತಾ ಪಕ್ಷವು ವಿಜಯಶಾಲಿಯಾಗಿದೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಸಾಮೂಹಿಕ ನಾಯಕತ್ವದ ಒಗ್ಗಟ್ಟಿನಿಂದ ಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದ ಕಾರಣ ಮುಂದಿನ ನಾಯಕ ಯಾರಾಗುತ್ತಾರೆಂಬ ಕುತೂಹಲ ಮೂಡಿದೆ.

    ಇದನ್ನೂ ಓದಿ: ಮಿಜೋರಾಂನಲ್ಲಿ ಮತ ಎಣಿಕೆ ಆರಂಭ; 174 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
    ಪ್ರಸ್ತುತ ಮುಖ್ಯಮಂತ್ರಿಯಾಗಲು 5 ನಾಯಕರು ಸಜ್ಜಾಗಿದ್ದಾರೆ. ಅಳೆದೂ ತೂಗಿ, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ನಾಯಕತ್ವವು ಶೀಘ್ರದಲ್ಲೇ ಹೊಸ ನಾಯಕ ಯಾರೆಂದು ಘೋಷಣೆ ಮಾಡುವ ನಿರೀಕ್ಷೆಯಿದೆ.
    ರೇಸ್​ನಲ್ಲಿರುವವರು ಇವರೇ….

    ವಸುಂಧರಾ ರಾಜೆ: 70ವರ್ಷದ ವಸುಂಧರಾ ರಾಜೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯನ್ನು ಎರಡು ಭಾರಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಬಿಜೆಪಿಯ ಸಂಸ್ಥಾಪಕ ನಾಯಕಿ ವಿಜಯರಾಜೇ ಸಿಂಧಿಯಾ ಅವರ ಪುತ್ರಿ. ಇವರು ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿದಿದ ನಂತರ ಧೋಲ್ಪುರದಿಂದ ಶಾಸಕರಾಗಿ ಆಯ್ಕೆಯಾದರು. ಇನ್ನು 2003 ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದಾಗ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು. ಅವರು ವಿಧಾನಸಭೆಗೆ ಮೂರು ಬಾರಿ ಮತ್ತು ಲೋಕಸಭೆಗೆ ಐದು ಬಾರಿ ಆಯ್ಕೆಯಾಗಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಸಚಿವವೆಯಾಗಿದ್ದರು.

    ಗಜೇಂದ್ರ ಸಿಂಗ್ ಶೇಖಾವತ್:
    ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಂಜೀವನಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಹಗರಣದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿ ಬಿದ್ದಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ರನ್ನು ಸೋಲಿಸುವ ಮೂಲಕ ತಮ್ಮ ರಾಜಕೀಯ ಪರಾಕ್ರಮವನ್ನು ಪ್ರದರ್ಶಿಸಿದ್ದರು. ವಸುಂಧರಾ ರಾಜೆ ಮತ್ತು ಬಾಬಾ ಬಾಲಕನಾಥ್ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಶೇಖಾವತ್ ಮೂರನೇ ಅತ್ಯುತ್ತಮ ಆಯ್ಕೆಯಾಗಿದ್ದಾರೆ.

    ದಿಯಾ ಕುಮಾರಿ:
    ಜೈಪುರ ರಾಜಮನೆತನದ ಸದಸ್ಯೆ ದಿಯಾ ಕುಮಾರಿ 2013 ರಲ್ಲಿ ಬಿಜೆಪಿಗೆ ಸೇರಿದ್ದು, ನಂತರ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 5.51 ಲಕ್ಷ ಮತಗಳ ದೊಡ್ಡ ಗೆಲುವಿನ ಅಂತರದಲ್ಲಿ ಸಂಸದೆಯಾಗಿ ಆಯ್ಕೆಯಾದರು. ‘ಜೈಪುರದ ಮಗಳು’ ಜನರಲ್ಲಿ ಜನರ ಕೈಗೆ ಸಿಗುವ ವ್ಯಕ್ತಿತ್ವದೊಂದಿಗೆ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ.

    ಬಾಬಾ ಬಾಲಕನಾಥ್: 
    ರಾಜಸ್ಥಾನದಲ್ಲಿ ಬಿಜೆಪಿಯ ಭರ್ಜರಿ ಗೆಲುವು ಮತ್ತೊಬ್ಬ ‘ಯೋಗಿ’ಯ ಉದಯಕ್ಕೆ ಕಾರಣವಾಗಬಹುದು. ಆಧ್ಯಾತ್ಮಿಕ ನಾಯಕ ಮತ್ತು ಅಲ್ವಾರ್ ಸಂಸದ ಬಾಬಾ ಬಾಲಕನಾಥ್ ಅವರನ್ನು ರಾಜಸ್ಥಾನದ ಯೋಗಿ ಎಂದು ಕರೆಯಲಾಗುತ್ತದೆ. ಇವರು ಸಹ ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಯಾಗಿದ್ದಾರೆ.40 ವರ್ಷದ ಇವರು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.
    ಕಿರೋಡಿ ಲಾಲ್ ಮೀನಾ : 
    ಮೀನಾ ಸಮುದಾಯವನ್ನು ಗೆಲ್ಲಿಸುವ ಸಲುವಾಗಿ ಹಿರಿಯ ನಾಯಕ ಕಿರೋಡಿ ಲಾಲ್ ಮೀನಾರನ್ನು ಚುನಾವಣೆಗೆ ಎಳೆಯಲಾಯಿತು. ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. 72 ವರ್ಷ ವಯಸ್ಸಿನ ಇವರು “ಡಾಕ್ಟರ್ ಸಾಹೇಬ್” ಮತ್ತು “ಬಾಬಾ” ಎಂದು ಜನಪ್ರಿಯರಾಗಿದ್ದು, ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿರುವವರಲ್ಲಿ ಒಬ್ಬರಾಗಿದ್ದಾರೆ.
    ಸಿ.ಪಿ. ಜೋಶಿ:
    ರಾಜಸ್ಥಾನ ಬಿಜೆಪಿಯ ಘಟಕದ ಮುಖ್ಯಸ್ಥ ಸಿ.ಪಿ. ಜೋಶಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 48 ವರ್ಷ ವಯಸ್ಸಿನ ಇವರಿಗೆ ಕಳೆದ ಮಾರ್ಚ್‌ನಲ್ಲಿ ಉಸ್ತುವಾರಿ ನೀಡಲಾಯಿತು, ಅದು ಗುಂಪುಗಾರಿಕೆ ತಡೆದು ಕಾಂಗ್ರೆಸ್‌ನೊಂದಿಗೆ ಪೈಪೋಟಿ ನಡೆಸಲು ಪ್ರಮುಖ ಪಾತ್ರವಹಿಸಿದ್ದರು. ಇವರು ಬಣಗಳನ್ನು ಒಟ್ಟುಗೂಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಹೀಗಾಗಿ ಇವರೂ ಮುಖ್ಯಮಂತ್ರಿ ರೇಸ್​ನಲ್ಲಿದ್ದಾರೆ.

    12 ಲಕ್ಷ ಸಾಲ ಮಾಡಿ ಚುನಾವಣಾ ಕಣಕ್ಕೆ ಇಳಿದ ಬಡವನಿಗೆ ಭರ್ಜರಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts