More

    12 ಲಕ್ಷ ಸಾಲ ಮಾಡಿ ಚುನಾವಣಾ ಕಣಕ್ಕೆ ಇಳಿದ ಬಡವನಿಗೆ ಭರ್ಜರಿ ಗೆಲುವು

    ನವದೆಹಲಿ: ದೇಶಾದ್ಯಂತ ಕುತೂಹಲದಿಂದ ಕಾಯುತ್ತಿದ್ದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆದ್ದಿದೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್​​ಗೆ  ಗೆಲುವಿನ ನಗೆ ಬೀರಿದೆ. ಕಡು ಬಡತನದಿಂದಲೂ ಅವರು ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಕೆಲವರಿಗೆ ಠೇವಣಿ ಕೂಡ ಸಿಗದಿದ್ದರೂ ಸದ್ಯ ಒಬ್ಬರು ಸುದ್ದಿಯಲ್ಲಿದ್ದಾರೆ. ಅವರೇ ಮಧ್ಯಪ್ರದೇಶದ ಕಮಲೇಶ್ವರ ದೊಡಿಯಾ

    ಮಧ್ಯಪ್ರದೇಶದ ಕಮಲೇಶ್ವರ್​​ ದೊಡಿಯಾ ಚುನಾವಣಾ ಕಣದಲ್ಲಿ ನಿಂತಿದ್ದರು. ಆದರೆ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ಅವರ ಬಳಿ ಇರಲಿಲ್ಲ. ಬಡ ಕುಟುಂಬಕ್ಕೆ ಸೇರಿದ ಕಮಲೇಶ್ವರ್ 12 ಲಕ್ಷ ಸಾಲ ಮಾಡಿಕೊಂಡಿದ್ದರು.  ಸೈಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹರ್ಷ್ ವಿಜಯ್ ಗೆಹ್ಲೋಟ್ ವಿರುದ್ಧ ಕಮಲೇಶ್ವರ್ 4618 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಮಲೇಶ್ವರ್ 71219 ಮತಗಳನ್ನು ಪಡೆದರೆ, ಹರ್ಷ 66601 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಸಂಗೀತಾ ಚರೇಲ್ ಮೂರನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಒಟ್ಟು ಶೇ.90.08 ಮತದಾನ ನಡೆದಿದೆ.

    ಕಮಲೇಶ್ವರ್ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಬಡ ಕುಟುಂಬದಿಂದ ಬಂದ ಕಮಲೇಶ್ವರ್ ಶಾಸಕರಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಭಾನುವಾರ ನಡೆದ ಚುನಾವಣಾ ಮತ ಎಣಿಕೆ ವೇಳೆ  ಪ್ರಚಂಡ ಬಹುಮತದಿಂದ ಗೆದ್ದ ಕಮಲೇಶ್ವರ್​ಗೆ ಸುತ್ತಮುತ್ತಲಿನ ಜನ ಅಭಿನಂದಿಸಿ ನೆರೆಹೊರೆಯಲ್ಲಿ ವಿಜಯೋತ್ಸವ ಆಚರಿಸಿದರು. 33 ವರ್ಷದ ಕಮಲೇಶ್ವರ್ ಅವರು ಭಾರತ್ ಆದಿವಾಸಿ ಪಕ್ಷದಿಂದ ಶಾಸಕರಾಗಿ ಗೆದ್ದಿದ್ದಾರೆ. ತಾಯಿ ಸೀತಾಬಾಯಿ ಕೂಲಿ ಕೆಲಸ ಮಾಡುತ್ತಿದ್ದರು. ಕಮಲೇಶ್ವರ್ ಸಹೋದರರು ಮತ್ತು 3 ಸಹೋದರಿಯರಲ್ಲಿ ಕಿರಿಯರು. ಕೂಲಿ ಕುಟುಂಬಕ್ಕೆ ಸೇರಿದ ಕಮಲೇಶ್ವರ್ ಪದವಿ ಮುಗಿಸಿ ಉದ್ಯೋಗ ನಿಮಿತ್ತ ಕೋಟಾಕ್ಕೆ ತೆರಳಿದ್ದರು. ಇವರು ಮನೆ ನಿರ್ಮಾಣ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆ.  

    ಮಧ್ಯಪ್ರದೇಶ ಚುನಾವಣಾ ಫಲಿತಾಂಶ ನೋಡಿದರೆ ಇಲ್ಲಿ ಬಿಜೆಪಿ 165 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಸಜ್ಜಾಗಿದೆ. ಕಾಂಗ್ರೆಸ್‌ಗೆ 63 ಸ್ಥಾನಗಳು ಮಾತ್ರ ಲಭಿಸಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ದಶಕಗಳೇ ಕಳೆದಿವೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts