BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಉಳಿದಿರುವುದು ಇನ್ನೂ ಎರಡೇ ವಾರಗಳಷ್ಟೇ. ಈ ವಾರದ ಮಧ್ಯೆ 100 ದಿನಗಳನ್ನು ಪೂರೈಸಿದ ಬಿಗ್ ಮಂದಿ, ವಾರಾಂತ್ಯದೊಳಗೆ ಆಡಿದ ಅಷ್ಟು ಮಾರಿಹಬ್ಬದ ಟಾಸ್ಕ್ಗಳಲ್ಲಿ ಬಿರುಸಿನ ಪೈಪೋಟಿ ನೀಡಿ, ಇದೀಗ ಫಿನಾಲೆ ಟಿಕೆಟ್ಗಾಗಿ ಸೆಣಸಾಡುತ್ತಿದ್ದಾರೆ. ಫಿನಾಲೆಯ ಕೊನೆಯ ಹಂತ ತಲುಪಲು ಉಳಿವಿಕೆಗಾಗಿ ಪ್ರಾರ್ಥಿಸುತ್ತಿದ್ದ ಐದು ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ಇದೀಗ ಚೈತ್ರಾ ಕುಂದಾಪುರ ಬಿಗ್ ಮನೆಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: ಆರೋಗ್ಯಕರ ಟೀಕೆ ಸ್ವಾಗತ, ತಿದ್ದಿಕೊಳ್ಳುವೆ; ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್: ಸಿಎಂ
ಈ ವಾರ ನಾಮಿನೇಷನ್ ಪಟ್ಟಿಯಲ್ಲಿ ಸಿಲುಕಿದ ತ್ರಿವಿಕ್ರಮ್, ಮೋಕ್ಷಿತಾ, ಧನರಾಜ್, ಭವ್ಯ ಗೌಡ ಮತ್ತು ಧನರಾಜ್ ನಡುವೆ ಅಂತಿಮವಾಗಿ ಚೈತ್ರಾ ಫಿನಾಲೆ ಓಟದಿಂದ ಹೊರಗುಳಿದಿದ್ದಾರೆ. ಮೋಕ್ಷಿತಾ, ಧನರಾಜ್ ಜತೆ ಸಂಚಿಕೆಯ ಕೊನೆಯವರೆಗೂ ಉಳಿವು-ಗೆಲುವಿನ ಚಿಂತೆಯಲ್ಲಿ ಮುಳುಗಿದ್ದ ಚೈತ್ರಾ, ಸುದೀಪ್ ಅವರ ಘೋಷಣೆಯ ಮೇರೆಗೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ.
ಈಗಾಗಲೇ ಫಿನಾಲೆ ಟಿಕೆಟ್ ಗೆದ್ದು ನೇರವಾಗಿ ಗ್ರ್ಯಾಂಡ್ ಫಿನಾಲೆ ವೇದಿಕೆ ಹತ್ತಿರುವ ಹನುಮಂತು ಜತೆ ಇನ್ನೂ ನಾಲ್ವರು ಯಾರಾಗುತ್ತಾರೆ ಎಂಬ ಕುತೂಹಲ ಸದ್ಯ ವೀಕ್ಷಕರಲ್ಲಿ ಕಾಡಿದೆ. ಮುಂದಿನ ವಾರ ಯಾರು ಮನೆಯಿಂದ ಎಲಿಮಿನೇಟ್ ಆಗಿ ಹೊರಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.