More

    ನಿರೂಪಣೆ ವೇಳೆ ಅಸಭ್ಯ ವರ್ತನೆ; ಕ್ಷಮೆಯಾಚಿಸಿದ ಬಿಬಿಸಿ ನಿರೂಪಕಿ ಮರ್ಯಮ್ ಮೋಶಿರಿ

    ನವದೆಹಲಿ: ಲೈವ್​ ಶೋನಲ್ಲಿ ಬಿಬಿಸಿ ನಿರೂಪಕಿಯೊಬ್ಬಳು ಮಧ್ಯದ ಬೆರಳು ತೋರಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಬಿಬಿಸಿ ನ್ಯೂಸ್ ನಿರೂಪಕಿ ಮರ್ಯಮ್ ಮೋಶಿರಿ ಅವರು ತಮ್ಮ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದು, ಇದು ಬೇಕಾಗಿ ಮಾಡಿದ್ದಲ್ಲ ಎಂದಿದ್ದಾರೆ.

    ಇತ್ತ ಮರ್ಯಮ್ ಮೊಶಿರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ವ್ಯಾಪಕ ಟೀಕೆಗೆ ಗುರಿಯಾಗಿದ್ದರು ಮತ್ತು ನಿರೂಪಕಿಯಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದರು.

    ಇದನ್ನೂ ಓದಿ: ಮದುವೆ ದಿಬ್ಬಣದಲ್ಲಿ ಶುರುವಾದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

    ಈ ಕುರಿತು ಪ್ರಕಟಣೆ ಹೊರಡಿಸಿರುವ ಮೋಶಿರಿ, ನಾನು ಆ ರೀತಿ ಮಾಡಿದ್ದರಿಂದ ಯಾರಾದರೂ ಮನನೊಂದು ಅಸಮಾಧಾನಗೊಂಡಿದ್ದರೆ ಕ್ಷಮಿಸಿ. ನಾನು ವೀಕ್ಷಕರಿಗಾಗಲಿ ಅಥವಾ ಯಾವುದೋ ಒಬ್ಬ ವ್ಯಕ್ತಿಗಾಗಲಿ ನಾನು ಆ ರಿತಿ ತೋರಿಸಿಲ್ಲ. ತಮಾಷೆ ಮಾಡಲು ಹೋಗಿ ಈ ರೀತಿಯಾಗಿದೆ ದಯವಿಟ್ಟು ಕ್ಷಮಿಸಿ ಎಂದು ಮೊಶಿರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬುಧವಾರ ನೇರ ಪ್ರಸಾರದ ಸಂದರ್ಭ ಬಿಬಿಸಿಯ ಸುದ್ಧಿ ನಿರೂಪಕಿ ಮರ್ಯಮ್ ಮೋಶಿರಿ ಕೌಂಟ್​ಡೌನ್​ ಮಾಡುವ ವೇಳೆ ಕ್ಯಾಮೆರಾದತ್ತ ಮಧ್ಯದ ಬೆರಳು ತೋರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮಾಧ್ಯಮ ಸಂಸ್ಥೆಯ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದರು. ಡೆಸ್ಕ್​ನಲ್ಲಿ ಕುಳಿತಿದ್ದ ನಿರೂಪಕಿ ಮರ್ಯಮ್​ ಮೊಶಿರಿ ಕ್ಯಾಮರಾದತ್ತ ಮಧ್ಯದ ಬೆರಳನ್ನು ತೋರಿಸುತ್ತ ವ್ಯಂಗ್ಯಭರಿತವಾಗಿ ನಗುತ್ತಿದ್ದರು. ಕೂಡಲೇ ಕ್ಯಾಮರಾ ಆನ್​ ಆಗಿದೆ ಎಂಬುದನ್ನು ಅರಿತು ದಿಸ್ ಈಸ್ ಬಿಬಿಸಿ ನ್ಯೂಸ್ ಲೈವ್ ಪ್ರಮ್ ಲಂಡನ್ ಎಂದು ಸುದ್ಧಿ ನಿರೂಪಣೆ ಆರಂಭಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts