More

    ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ ಖುಷಿಯಾಗಿರಬೇಕು; ಎಬಿಡಿ ಹೀಗೆ ಹೇಳಿದ್ಯಾಕೆ

    ಮುಂಬೈ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಇತ್ತ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ ಅವರನ್ನು ಕ್ಯಾಪ್ಟನ್​ ಆಗಿ ನೇಮಿಸಿದ್ದು, ವ್ಯಾಪಕ ಆಕ್ರೋಶ ಹಾಗೂ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

    ಇತ್ತ ಮುಂಬೈ ಇಂಡಿಯನ್ಸ್​ ಮ್ಯಾನೇಜ್​ಮೆಂಟ್​ ಹಾರ್ದಿಕ್​ ಪಾಂಡ್ಯರನ್ನು ನೂತನ ಕ್ಯಾಪ್ಟನ್​ ಎಂದು ಘೋಷಿಸಿದ ಪರಿಣಾಮ ಸಾಮಾಜಿಕ ಜಾಲತಾಣದ ಮೇಲೆ ಬೀರಿದ್ದು, ಘೋಷಣೆಯಾದ ಒಂದು ಘಂಟೆಯೊಳಗೆ 400,000 ಅನುಯಾಯಿಗಳು ಅನ್​ಫಾಲೋ ಮಾಡಿದ್ದಾರೆ. ಇತ್ತ ರೋಹಿತ್​ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.

    ಇದನ್ನೂ ಓದಿ: 11 ವರ್ಷಗಳಲ್ಲಿ ಏನು ಬದಲಾಗಿಲ್ಲ, ಮಹಿಳೆಯರ ವಿರುದ್ಧ ಹೆಚ್ಚುತ್ತಿವೆ ದೌರ್ಜನ್ಯ ಪ್ರಕರಣಗಳು: ನಿರ್ಭಯಾ ತಾಯಿ

    ಈ ಕುರಿತು ಪ್ರತಿಕ್ರಿಯಿಸಿರುವ ಮಿ. 360 ಖ್ಯಾತಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​​ ಹಾರ್ದಿಕ್​ ಪಾಂಡ್ಯ ಫ್ರಾಂಚೈಸಿಗೆ ಮರಳಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಬೇಕೇ ಹೊರತು ಈ ರೀತಿ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ. ನ್ಯಾಯೋಚಿತವಾಗಿ ಹೇಳಬೇಕೆಂದರೆ ಹಾರ್ದಿಕ್​ ಪಾಂಡ್ಯ ಅವರು ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿದ್ದರು.

    ಮೂರು ಭಾರಿ ತಂಡ ಪ್ರಶಸ್ತಿ ಜಯಿಸಿದಾಗ ಅವರು ಜೊತೆಗಿದ್ದರು. ಕೆಲವೊಂದು ಘಟನೆ ಹಾಗೂ ಅವರ ನಿರ್ಧಾರದಿಂದ ಬೇರೊಂದು ತಂಡಕ್ಕೆ ಹೋಗಿದ್ದರು. ಆದರೆ, ಅವರು ತಂಡಕ್ಕೆ ಮರಳಿದ್ದು, ಅವರನ್ನು ನಾಯಕತ್ವ ವಹಿಸಲಾಗಿದೆ. ಪಾಂಡ್ಯರನ್ನು ನಾಯಕನನ್ನಾಗಿ ಮಾಡಿದ ಮೇಲೆ ಜನರು ಪ್ರತಿಕ್ರಿಯೆಯು ಬಹಳ ಋಣಾತ್ಮಕವಾಗಿದೆ. ಇದು ನನಗೆ ಬಹಳ ವಿಚಿತ್ರ ಎನ್ನಿಸಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನಗೊಂಡಿರುವ ಹಲವು ಪೋಸ್ಟ್​ಗಳನ್ನು ನೋಡುತ್ತಿದ್ದೇನೆ. ಅಭಿಮಾನಿಗಳು ಹಾರ್ದಿಕ್ ಅವರನ್ನು ಟೀಕಿಸುವ ಬದಲು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಮಿ. 360 ಖ್ಯಾತಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts