More

    11 ವರ್ಷಗಳಲ್ಲಿ ಏನು ಬದಲಾಗಿಲ್ಲ, ಮಹಿಳೆಯರ ವಿರುದ್ಧ ಹೆಚ್ಚುತ್ತಿವೆ ದೌರ್ಜನ್ಯ ಪ್ರಕರಣಗಳು: ನಿರ್ಭಯಾ ತಾಯಿ

    ನವದೆಹಲಿ: ನಮ್ಮ ಮಗಳು ತೀರಿಕೊಂಡು 11 ವರ್ಷಗಳಾಗುತ್ತ ಬಂದರು ದೇಶದಲ್ಲಿ ಇದುವರೆಗೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಎಲ್ಲ ಸಹಕಾರದಿಂದ ನಮಗೆ ನ್ಯಾಯ ಸಿಕ್ಕಿದೆ. ಆದರೆ, ನ್ಯಾಯಾಲಯದಲ್ಲಿ ಹಲವು ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಇದಕ್ಕೆಲ್ಲಾ ಮುಕ್ತಿ ಸಿಗುವುದು ಯಾವಾಗ ಎಂದು ನಿರ್ಭಯಾ ತಾಯಿ ಆಶಾ ದೇವಿ ಪ್ರಶ್ನಿಸಿದ್ದಾರೆ.

    ಡಿಸೆಂಬರ್​ 16, 2012ರಂದು ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಕೆರಳಿಸಿತ್ತು. ಪ್ರಕರಣದ ಕುರಿತು ಮಾತನಾಡಿರುವ ನಿರ್ಭಯಾ ತಾಯಿ ಆಶಾ ದೇವಿ ಕಾನೂನು ಸುವ್ಯವಸ್ಥೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಕಾನೂನುಗಳನ್ನು ರಚಿಸಲಾಗಿದೆ, ಆದರೆ ಏನನ್ನೂ ಮಾಡಲಾಗಿಲ್ಲ. ಕೆಲವೊಮ್ಮೆ ಏನೂ ಬದಲಾಗುವುದಿಲ್ಲ ಎಂಬ ಭಾವನೆಯಿಂದ ನಾವು ನಿರಾಶೆಗೊಳ್ಳುತ್ತೇವೆ. ಅನೇಕ ಪ್ರಕರಣಗಳು ನಮಗೂ ಬರುತ್ತವೆ ಮತ್ತು ನಾವು ಅವರಿಗೆ ನಮ್ಮ ನೈತಿಕ ಬೆಂಬಲವನ್ನು ಮಾತ್ರ ನೀಡಬಹುದಾಗಿದೆ.

    Nirbhaya Mother Asha Devi

    ಇದನ್ನೂ ಓದಿ: KSRTC ಟ್ರೇಡ್‌ಮಾರ್ಕ್ ವಿವಾದ; ಕೇರಳದ ಅರ್ಜಿ ವಜಾ: ಕರ್ನಾಟಕಕ್ಕೆ ಜಯ

    ನಮ್ಮ ಮಗಳ ವಿಷಯದಲ್ಲಿ ಇಡೀ ದೇಶವೇ ನಮ್ಮ ಬೆಂಬಲಕ್ಕೆ ನಿಂತಿತ್ತು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಸಹಕಾರಿಯಾಗಿದೆ. ಅತ್ಯಾಚಾರದ ಘಟನೆಗಳು ನಡೆದಾಗ, ಸಂತ್ರಸ್ತೆಯ ಜೊತೆ ಯಾರೂ ನಿಲ್ಲುವುದಿಲ್ಲ. ನಮ್ಮ ಮಗಳ ವಿಷಯದಲ್ಲಿ ಪ್ರತಿಭಟನೆಗಳು ನಡೆದಾಗ, ಹಲವಾರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅದರಲ್ಲಿ ಭಾಗವಹಿಸಿದರು

    ಜನರು ಸಾಕಷ್ಟು ಹೋರಾಟ ಮಾಡಿದರು ದೇಶದಲ್ಲಿ ಏನೂ ಬದಲಾಗಿಲ್ಲ. ಒಬ್ಬ ನಿರ್ಭಯಾಳಿಗೆ ನ್ಯಾಯ ಕೊಟ್ಟರೆ ಎಲ್ಲರಿಗೂ ನ್ಯಾಯ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದ್ದು, ಸಮಯಕ್ಕೆ ಸರಿಯಾಗಿ ನ್ಯಾಯ ಸಿಗಬೇಕಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಆಶಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts