

Silk Smitha : ಕಾಲಿವುಡ್ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಅದರಲ್ಲೂ ನಟಿಯರೇ ಹೆಚ್ಚು. ಇದೀಗ ರಂಗನಾಥನ್ ದಿವಂಗತ ನಟಿ ಸಿಲ್ಕ್ ಸ್ಮಿತಾ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಬೈಲ್ವಾನ್ ರಂಗನಾಥನ್, ಸಿಲ್ಕ್ ಸ್ಮಿತಾ ಬಗ್ಗೆ ಏನು ಹೇಳಿದರು ಎಂಬುವುದಕ್ಕೂ ಮುನ್ನ ಸಿಲ್ಕ್ ಸ್ಮಿತಾ ಬಗ್ಗೆ ತಿಳಿಯೋಣ. ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಸಾವಿಗೀಡಾದರು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು.
80 ದಶಕದಲ್ಲಿ ಸಿಲ್ಕ್ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಐಟಂ ಸಾಂಗ್ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.
ತಾಜಾ ಸಂಗತಿ ಏನೆಂದರೆ ಬೈಲ್ವಾನ್ ರಂಗನಾಥನ್ ಅವರು ಇತ್ತೀಚೆಗೆ King 24x7 ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸಿಲ್ಕ್ ಸ್ಮಿತಾ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಖ್ಯಾತ ನಟಿ ಸಿಲ್ಕ್ ಸ್ಮಿತಾ ಅವರೊಂದಿಗಿನ ಸ್ನೇಹ ಮತ್ತು ಆಕೆಯ ಸಾವಿಗೆ ಕಾರಣವಾದ ಘಟನೆಯನ್ನು ವಿವರಿಸಿದ್ದಾರೆ.
ಹಿಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಯಾಗಲು ಹುಡುಗಿಯರು ತಮ್ಮ ಅರೆ ನಗ್ನ ಮನಮೋಹಕ ಚಿತ್ರಗಳನ್ನು ನಾನು ಕೆಲಸ ಮಾಡಿದ ಮಾಧ್ಯಮಗಳಿಗೆ ಕಳುಹಿಸುತ್ತಿದ್ದರು. ಅಂತಹ ಒಂದು ಚಿತ್ರಗಳಲ್ಲಿ ಸಿಲ್ಕ್ ಸ್ಮಿತಾ ಅವರ ಚಿತ್ರವೂ ಇತ್ತು. 1980ರಲ್ಲಿ ನಾನು ಕೆಲಸ ಮಾಡುತ್ತಿದ್ದ ಮಾಯಾ ಪತ್ರಿಕೆಗೆ ಬಂದಿತ್ತು. ಆಗ ವಂದಿಚಕ್ಕರಂ ಚಿತ್ರವನ್ನು ನಿರ್ದೇಶಿಸುತ್ತಿದ್ದ ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾ ಚಿತ್ರವನ್ನು ನೋಡಿ ನನ್ನ ಬಳಿಗೆ ಬಂದರು. ವಿನು ಚಕ್ರವರ್ತಿ ಅವರು ಫೋಟೋ ತೆಗೆದ ವ್ಯಕ್ತಿಯನ್ನು ಹುಡುಕಲು ಹೋದರು ಮತ್ತು ಶೀಘ್ರದಲ್ಲೇ ಸಿಲ್ಕ್ ಸ್ಮಿತಾ ಅವರನ್ನು ಸಹ ಕಂಡುಕೊಂಡರು ಎಂದು ಬೈಲ್ವಾನ್ ಹೇಳಿದರು.
ಮೊದಲ ಸಿನಿಮಾದ ನಂತರ ಸ್ಮಿತಾಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದವು. ಸಿಲ್ಕ್ ಸಿಲ್ಕ್ ಸಿಲ್ಕ್ ಚಿತ್ರದಲ್ಲಿ ನಟಿಸಿದ ನಂತರ ಸಿಲ್ಕ್ ಸ್ಮಿತಾ ಅವರಿಗೆ 'ಸಿಲ್ಕ್' ಎಂದು ಹೆಸರು ಬಂತು. ಸಾರ್ವಜನಿಕ ಸ್ಥಳಗಳಲ್ಲಿ ಸ್ಮಿತಾ ಅವರು ನನ್ನನ್ನು ನೋಡಿದಾಗಲೆಲ್ಲಾ ಸ್ನೇಹದಿಂದ ವರ್ತಿಸುತ್ತಿದ್ದರು ಮತ್ತು ಸಾಂದರ್ಭಿಕವಾಗಿ ನನಗೆ ಹಣ ನೀಡುತ್ತಿದ್ದರು. ಅವಳು ಹಣ ನೀಡಿದಾಗಲೆಲ್ಲ ನಾನು ಹಣ ಬೇಡ, ಸಿನಿಮಾದಲ್ಲಿ ಅವಕಾಶ ಬೇಕು ಎಂದು ಕೇಳುತ್ತಿದ್ದೆ. ಸಿಲ್ಕ್ ಸ್ಮಿತಾ ಅವರ ಪತಿ ಮತ್ತು ಪ್ರೇಮಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದೆ. ಸ್ಮಿತಾ ಅವರು ಗ್ಲಾಮರ್ ಪಾತ್ರಗಳಿಂದ ಗಮನ ಸೆಳೆದರೂ ಗ್ಲಾಮರ್ ಪಾತ್ರಗಳನ್ನು ಮಾಡಲು ಅವರಿಗೆ ಇಷ್ಟವಿರಲಿಲ್ಲ ಎಂದು ಬೈಲ್ವಾನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿರುವ ಬೈಲ್ವಾನ್, ತನ್ನ ಕೊನೆಯ ವರ್ಷಗಳಲ್ಲಿ, ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ ವೈದ್ಯನೊಂದಿಗೆ ಸಿಲ್ಕ್ ಸ್ಮಿತಾ ಸಂಬಂಧ ಹೊಂದಿದ್ದರಿ. ವೈದ್ಯನ ಮಗನಿಗಾಗಿ ಚಲನಚಿತ್ರವನ್ನು ನಿರ್ಮಿಸುವ ವಿಚಾರದಲ್ಲಿ ಉಂಟಾದ ಸಮಸ್ಯೆಗಳೇ ಆಕೆಯ ಆತ್ಮಹತ್ಯೆಗೆ ಕಾರಣವಾಯಿತು ಎಂದು ಬೈಲ್ವಾನ್ ರಂಗನಾಥ್ ಹೇಳಿದ್ದಾರೆ. ಆದರೆ, ಇವರ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದು ಸಿಲ್ಕ್ ಸ್ಮಿತಾ ಆಪ್ತರೇ ತಿಳಿಸಬೇಕಿದೆ.
ವಿವಾದಗಳಿಂದಲೇ ಸುದ್ದಿಯಾಗುವ ಬೈಲ್ವಾನ್ ಈ ಹಿಂದೆಯೂ ಸಿಲ್ಕ್ ಸ್ಮಿತಾ ಬಗ್ಗೆ ಮಾತನಾಡಿದ್ದರು. ಶವಾಗಾರದಲ್ಲಿರುವ ನೌಕರರು ಕುಡಿದ ಅಮಲಿನಲ್ಲಿ ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕೆ ಶವಾಗಾರದಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಶವಾಗಾರಗಳು ಇಂದಿನಂತೆ ಅಂದು ಸ್ವಚ್ಛವಾಗಿರಲಿಲ್ಲ. ನೈರ್ಮಲ್ಯವಾಗಿರಲಿಲ್ಲ. ಹೆಚ್ಚು ದುರ್ವಾಸನೆ ಬೀರುವ ಸ್ಥಳವಾಗಿತ್ತು. ಅಲ್ಲಿ ಕೆಲಸ ಮಾಡುವವರಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲ. ಅಲ್ಲಿನ ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಸಾಮಾನ್ಯವಾಗಿ, ಶವಪರೀಕ್ಷೆಯ ಸಮಯದಲ್ಲಿ, ವೈದ್ಯರು ನಿಂತು ಹೇಳುತ್ತಾರೆ. ಸಿಬ್ಬಂದಿ ದೇಹವನ್ನು ಕತ್ತರಿಸುತ್ತಾರೆ. ಸಿಲ್ಕ್ ಸ್ಮಿತಾಳನ್ನು ಕಣ್ಮನ ಸೆಳೆಯುವ ಸೌಂದರ್ಯದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಆಸೆ ಎಲ್ಲರಿಗೂ ಇತ್ತು. ಹೀಗಿರುವಾಗ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಶಾಂತವಾಗಿರುತ್ತಾರೆ? ಅವರು ತಮ್ಮನ್ನು ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅವಕಾಶಗಳು ಹೆಚ್ಚಿವೆ ಎಂದಿದ್ದರು. ಇದು ಕೂಡ ವಿವಾದ ಹುಟ್ಟು ಹಾಕಿತ್ತು. (ಏಜೆನ್ಸೀಸ್)